ಮನವೆಂಬ ಮನೆಯ ಅಟ್ಟ-ಗರಾಜುಗಳಲ್ಲಿ
ಬಲೆ ಕಟ್ಟಿ, ಧೂಳು ತುಂಬಿದ ಮೂಲೆ-ಮೂಲೆಗಳಿಂದ
ಹುಡುಕಿ ತೆಗೆದು ಒದರಿ,ಕೊಡವಿ
ಮೆಲ್ಲನೆ ಬಿಚ್ಚಿಟ್ಟ ನೆನಪುಗಳಾ ರತ್ನಗಂಬಳಿಯಲಿ
ಮಾಸಿದ ಹೆಜ್ಜೆ ಗುರುತುಗಳು,
ಕಹಿ ನೆನಪುಗಳ ದುರ್ನಾತ,
ಸವಿ ನೆನಪುಗಳ ಸ್ಪರ್ಶ-ಸುಖ,
ವಜ್ರ-ವೈಢೂರ್ಯಕಿಂತಲೂ ಬೆಲೆ ಬಾಳ್ವವು
ಎಲ್ಲದಕೂ ಮಿಗಿಲಾದವು...