ಬುಧವಾರ, ಏಪ್ರಿಲ್ 21, 2004

ವೈರಾಗ್ಯ [21/04/2005]

part 1: ಹಗಲಿಡೀ ದುಡಿದು ದಣಿವ ಜಗಕೆ ಇರುಳಲೇಕೀ ನೀರವತೆ? ಇಮ್ಮಡಿಗೊಳ್ಳುವುದು ಎನ್ನಲಿ ಒಂಟಿತನದ ತೀವ್ರತೆ ಇಷ್ಟು ಪಡೆವುದಕೆ ಕಳೆದುಕೊಂಡಿದ್ದೆಷ್ಟೋ ಎಂಬ ಭಾವುಕತೆ part 2: ಆಗಸದುದ್ದಗಲಕ್ಕೂ ಹರಡಿಕೊಂಡ ಒಂಟಿತನದ ಛಾಯೆ ನಾನದೇ ಆಗಸದಲಿ ಗಿರಗಿಟ್ಲೆ ಹೊಡೆವ ಒಂಟಿಹದ್ದು! ಪಡೆದಷ್ಟೂ ಬೇಕೆನಿಸುವ ಬಕಾಸುರನುತ್ಸಾಹ ಕೊಂಡರೂ ಕೊಡದೆನುವ ಚಿಂತೆಗಳಾಗರ ಎಲ್ಲವನೂ ಪಡೆದ ಎನಗೇನು ಕಮ್ಮಿ? ವೇದಾಂತಕ್ಕೇನೂ ಕಡಿಮೆಯಿಲ್ಲ ದಿನವೂ ಬದನೆಕಾಯಿ ಹುಳಿ!