ಶನಿವಾರ, ಏಪ್ರಿಲ್ 10, 2004

ಕಾವ್ಯ ಕೃಷಿ [10/10/2004]

ಕಾವ್ಯ-ಕೃಷಿ ಕವಿಗೆ ಕಾವ್ಯ ಹೊಸೆಯುವ ಕಲೆ ಕರತಲಾಮಲಕ ??!!?? ಭಾವನೆಗಳೇ ಹಾಸುಹೊಕ್ಕಾದ ಮನಸ್ಸೆಂಬ ಬುಡ್ಡಿದೀಪದಡಿ ಪದಗಳಿಗೆ ತಡಕಾಡಿದರೂ ಸಿಗಲಿಲ್ಲವೇನು? ಬರಿಗೈ ಬ್ರಹ್ಮಚಾರಿ! ಭಾವಾವೇಶದಿಂದ ಕೂಡಿದ ಕನಸುಮೇಲೋಗರಮಾಡಿ ಬಡಿಸು, ಕಾವ್ಯವಲ್ಲದಿರೆ ಕವಿತೆಯಾದೀತು; ಪದ್ಯವಲ್ಲದಿರೆ ಚುಟುಕವಾದೀತು! ಸರ್ವ ಸತ್ಯಗಳೂ ಸತ್ತು ಮನಸ್ಸು ನಿರ್ವಿಕಾರ ಸ್ಮಶಾನದಂತಾಗಿ ಹೊಗೆಯಾಡುವತ್ತ ಹೊರಳಿ ಸಿಕ್ಕ ಸಿಕ್ಕವುದನೇ ಹಿಡಿದು ಪೋಣಿಸಿದನು!