ಶುಕ್ರವಾರ, ಅಕ್ಟೋಬರ್ 7, 2005

ವ್ಯಾಖ್ಯಾನಗಳು [07/10/2005]

ವ್ಯಾಖ್ಯಾನಗಳು - Definitions! ಮಳೆಬಿಲ್ಲು ಇಳೆಯ ನೆತ್ತಿಯ ಮೇಲೆ ಅರುಣ-ವರುಣ ಕೂಡಿ ಬರೆದ ಕವನ ಬಿಸಿಲ್ಮಳೆ ಸ್ಟಾಂಪಿನ ಮೇಲಿನ ಮಸಿ ಮುಗಿದ ಠಸ್ಸೆಯಂತೆ ಬಿದ್ದರೂ ಬೀಳದಂತಹ ಸುರಿದರೂ ಧಗೆ ಅಳಿಯದಂತಹ ಹೀಗೆ ಬಂದು ಹಾಗೆ ಹೋಗುವ ಹೊಸಮನೆ-ಅಳಿಯ! ನಕ್ಷತ್ರಗಳು ಬಾನಂಗಳದಲಿ ದಿನವೂ ಕರಗಿ-ಬೆಳೆವ ಚಂದ್ರದೇವನಿಗಾಗಿ ನಡೆಯುವ 'ನಿತ್ಯಲಕ್ಷದೀಪೋತ್ಸವ' ಚಂದ್ರ ಚಕೋರನಾದಿಯೂ, ಇಂದ್ರನಂತ್ಯವೂ, ನಡುವೆ ಪೂರ್ಣಚಂದ್ರನಂತೆ!