ನಿದ್ದೆ
ನಲ್ಲೆ,
ಕಳೆದೆರಡು ದಿನಗಳಿಂದ
ಮಾಯವಾಗಿತ್ತು ನನ್ನ ನಿದ್ದೆ.
ಕಾರಣ,
ನನ್ನ ಜತೆಯಲ್ಲಿ ನೀನಿದ್ದೆ!
ಅಂದು-ಇಂದು
ಅಂದು :
ಭಾರತವಾಗಬೇಕು ರಾಮರಾಜ್ಯ
ಇಂದು :
ಭಾರ - ತಾವಾಗಬೇಕು ಎಂಬ ಪುಢಾರಿಗಳ ವ್ಯಾಜ್ಯ!
ಅದೃಷ್ಟ
ಶ್ರೀಮತಿಯ ಕಣ್ತಪ್ಪಿಸಿ
ಕ್ಲೀಶಾಳೊಡನೆ ಪಾಂಡು,
ಥೇಟರಿಗೆ
ಎಲ್ಲರಿಗಿಂತ ಮೊದಲೇ ಬಂದಾಗಿತ್ತು
ಜನರೂ ಬರಲಿಲ್ಲ
ಥೇಟರೂ ತೆರೆಯಲಿಲ್ಲ
ಪಾಂಡುವಿನದೃಷ್ಟಕ್ಕಂದು
'ಬೆಂಗಳೂರು ಬಂದ್'-ಆಗಿತ್ತು!