ಬುಧವಾರ, ಮಾರ್ಚ್ 8, 2006

ಮರುಜೀವ

ಕನ್ನಡ-ಸೇವೆ ಅನ್ನೋ ನಮ್ಮ Closed Group ಫೋರಂ ಪ್ರಾರಂಭವಾದ ಖುಷೀಲಿ ಹಾಗೆ ಹೊರಹೊಮ್ಮಿದ ನಾಲ್ಕು ಸಾಲುಗಳು. ಹುದುಗಿಹೋಗಿದ್ದ ಮನೋಭಿಲಾಷೆ ಸತ್ತು ಹೋಗಿದ್ದ ಕನಸುಗಳು ಮುಗಿದೇ ಹೋಗಿದ್ದ ಕತೆಗಳು ಮತ್ತೆ ಮಗದೊಮ್ಮೆ ಮರುಜೀವ ಪಡೆದು ರೆಕ್ಕೆ ಬಿಚ್ಚಿ ಒಮ್ಮೆ ಒದರಿ ಗರಿಗೆದರಿ ನಿಂತಿವೆ ಕಣ್ಮುಂದೆ ಕನ್ನಡಕ್ಕಾಗಿ ಸದಾ ಹೋರಾಟ ನಡೆಸಲು ನಿಶ್ಚಲ ನಿರಂತರ ಹಾರಾಟ ನಡೆಸಲು ಎಲ್ಲೆಯೇ ಇಲ್ಲದ ದಿಗಂತದೆಡೆ ಹಾರಿಹೋಗಲು ಸಜ್ಜಾಗಿ ನಿಂತಿರುವ ಈ ಸುಸಂದರ್ಭದಲಿ ಕಂಬಾರರ ನುಡಿಯಂತೆ "ಐತಿ ಜಾಗ ಒಳಗ... ಬನ್ನಿರಿ ನೀವು ನಮ್ಮ ಬಳಗ..."