ನೀವು ನೋಡಬಯಸುವ ಪುಟವು ಈಗ ಇಲ್ಲಿ ಲಭ್ಯವಿದೆ:
ಕಾವ್ಯ-ಕೃಷಿ
ಅಡಚಣೆಗಾಗಿ ಕ್ಷಮಿಸಿ.
The content you are looking for is now available on:
ಕಾವ್ಯ-ಕೃಷಿ
Sorry for the inconvenience.
ಬುಧವಾರ, ಜೂನ್ 24, 2009
ಟೈಂಪಾಸ್
ಸಂಜೆ ಬಾನಿನಂಚಿನಲ್ಲಿ...
ಸಂಜೆ ಬಾನಿನಂಚಿನಲ್ಲಿ ಬಿದ್ದ ಬಿದಿಗೆ ಚಂದಿರ
ಶಚೀತೀರ್ಥದಾಳದಲ್ಲಿ ಶಕುಂತಲೆಯ ಉಂಗುರ
ದೂರ್ವಾಸರ ಶಾಪವಿಗೋ ಕವಿಯುತಿಹುದು ಸುತ್ತಲೂ
ಕಂಡುದೆಲ್ಲ ಜಾರುತಿಹುದು ಮೆಲ್ಲನಿರುಳ ತಮದೊಳು
ಅಸಹಾಯಕ ತಾರೆಬಳಗ ಹನಿಗಣ್ಣೊಳು ನೀರವ
ಸುಯ್ವ ಗಾಳಿ ತಡೆಯುತಿಹುದು ಉಕ್ಕಿಬರುವ ದುಃಖವ
-ಜಿ.ಎಸ್.ಶಿವರುದ್ರಪ್ಪನವರು
ನಾನು ಅತಿಯಾಗಿ ಪ್ರೀತಿಸುವ ಭಾವಗೀತೆಗಳಲ್ಲೊಂದು ಈ ಹಾಡು.ನನಗೆ ಬುದ್ಧಿ ತಿಳಿದಾಗಿನಿಂದಲೂ ಅದೆಷ್ಟು ಬಾರಿ ಕೇಳಿ ಮೋಹಿತನಾಗಿದ್ದೇನೋ ನನಗೇ ತಿಳಿಯದು.ಈ ಗೀತೆಯ ಪದ-ಪ್ರಯೋಗ,ಲಾಲಿತ್ಯ,ಭಾವಾರ್ಥ, ಸಿ.ಆಶ್ವಥ್‍ರ ಸಂಗೀತ, ರತ್ನಮಾಲಿ ದನಿ ನನ್ನನ್ನು ಸದಾ ಕಾಡಿದೆ.
ಒಲ್ಲದ ಮನಸ್ಸಿನಿಂದಲೇ ಜಿಎಸ್‍ಎಸ್ ಕ್ಷಮೆ ಕೋರುತ್ತಾ ಇದಕ್ಕೊಂದು ಅಣಕುವಾಡು ಬರೆಯೋ ಮೂರ್ಖ ಕೆಲಸವೊಂದನ್ನು ಮಾಡಿದ್ದೇನೆ.ಒಮ್ಮೆ ಓದಿ ನಕ್ಕುಬಿಡಿ.
ಸಂಡೆ ಬಾರಿನಂಚಿನಲಿ...
ಸಂಡೆ ಬಾರಿನಂಚಿನಲಿ ಬಿದ್ದ ಕುಡುಕ ಸುಂದರಾ
ಮಲ್ಯನ್ ತೀರ್ಥದಾಳದಲ್ಲಿ ಎಂಗೇಜ್‍ಮೆಂಟಿನುಂಗುರ
ಹಳೇ ಲವ್ವರ್ರಿನ ಶಾಪವಿಗೋ ಇರಿಯುತಿಹುದು ಸುತ್ತಲೂ
ಉಂಡುದೆಲ್ಲ ಕಕ್ಕುತಿಹನು ಚಿಕ್ಕಕರುಳ ಶ್ರಮದೊಳು
ಸ್ವಸಹಾಯಕ ಬಾರ್-ಬಳಗ ಕೆಂಗಣ್ಣೊಳು ಖಾರವ?
ರಾತ್ರಿಪಾಳಿ ಕರೆಯುತಿಹುದು,ಬಂದು ಕೊಡುವೆ ಲೆಕ್ಕವ
ಈ ಗೀತೆಯನ್ನು ನೀವಿನ್ನೂ ಕೇಳಿಲ್ಲದೇ ಹೋದಲ್ಲಿ ಈಗಲೇ ರತ್ನಮಾಲ ಪ್ರಕಾಶ್ ದನಿಯಲ್ಲಿ ಇಲ್ಲಿ ಕೇಳಿ ನೋಡಿ