ಸೋಮವಾರ, ಜೂನ್ 8, 2009

ಸಂಜೆಗಣ್ಣು

ದಿಗಂತದಾಚೆಕಡೆಯೆಲ್ಲೋ ದೂರದಲಿ ಮೋಡಗಳ ಹಾಸಿಹೊದ್ದ ಸೂರ್ಯನಾಕಳಿಕೆ,ಮೈಮುರಿತ,ತೂಕಡಿಕೆ ದಿಕ್ಕೆಟ್ಟು ಗೂಡಕಡೆ ಹಾ! ರುತಿರುವ ಹಕ್ಕಿಹಿಂಡು,ದಟ್ಟಣೆ,ಹೊಗೆ,ಕೆಂಧೂಳಿ ಗದ್ದಲ ಗೊಂದಲಗಳ ನಡುವೆಯೂ ನೀ ರವ ಮೌನ ತಬ್ಬಿ,ಗಜಿಬಿಜಿ ಸಂಗೀತೋತ್ಸವ ಅಲುಗಾಡದ ಎಲೆ ಗಿಡ ಮರ ಗಳ ಸೀಳಿಕೊಂಡು ತಂಪಾದ ಗಾಳಿ ನಿಡುಸುಯ್ದಂತೆ ತುಟಿಪಿಟಕ್ಕೆನ್ನದೆ ಘನಗಾಂಭೀರ್ಯದ ರಾಜಮುದ್ರೆ ಹೊತ್ತ ನಿನ್ನ ನೋಡುತ್ತಲೇ ಸಾಗಿದ ಕಿಕ್ಇರಿದ ಜನಸ್ತೋಮ ರಾಜಹಂಸ,ಪುಷ್ಪಕ,ತ್ರಿಚಕ್ರ,ದ್ವಿಚಕ್ರ ಅಂಬೇಡ್ಕರ್ ಬೀದಿಯುದ್ದಕೂ ಮೆರವಣಿಗೆ ಅರೆಘಳಿಗೆ ಬಿಟ್ಟಕಣ್ಣುಬಾಯಿ ಅಬ್ಬಾ! ಮತ್ತದೇ .ಗೊಂದಲ .ಗದ್ದಲ .ಚಡಪಡಿಕೆ