ಆ ನಗು...
ಹುಚ್ಚು ಹಿಡಿಸಿತು ಎನಗೂ...
ಅದರ ಹಿಂದಿರುವ
ಆ ನಿಷ್ಕಲ್ಮಷ ಪ್ರೇಮ,
ನಿಷ್ಕಾಮ ಪ್ರೀತಿಯು
ಭೋರ್ಗರೆವ ಜಲಪಾತದಂತೆ
ನುಗ್ಗಿ ಬಂತು ಎನ್ನೆಡೆಗೆ
ಕೊಚ್ಚಿಕೊಂಡು ಹೋಯಿತು
ಎನ್ನ ಹೃದಯವನು...
ಬರಸೆಳೆದು ಅಪ್ಪಲೇ?
ತಬ್ಬಿ ಮುದ್ದಾಡಲೇ?
ಮುತ್ತಿನ ಮಳೆಗೈಯ್ಯಲೇ?
ತಾಯಿಯ ತೆಕ್ಕೆಯಲಿ
ಎದೆಗವಚಿಕೊಂಡು
ಪಿಳಪಿಳನೆ ನೋಡುತ್ತಿರುವ
ಆ ಕಣ್ಣುಗಳಲ್ಲಿ ಕಾಣುತ್ತಿರುವುದು
ತಿರುಗಿ ನೋಡಬೇಕೆನಿಸುವ,
ಮುಗ್ಧ ಸಹಜ ಸೌಂದರ್ಯ!