ಗೋಕುಲದಲಿ ಬೆಣ್ಣೆ ಕಳುವಾದೊಡೆ
ಕೆಲಸವದವನದೇ...
ಕಳ್ಳ ಕೃಷ್ಣ, ಬೆಣ್ಣೆ ಕೃಷ್ಣನದೇ
ಮುರಳಿನಾದಕೆ ಮಮರೆತಿರೆ
ನೀರೆಯರ ಸೀರೆ ಕದ್ದೊಯ್ವ
ಕಳ್ಳ ಕೃಷ್ಣ ಗೋಪಾಲಕೃಷ್ಣ
ಗೋಕುಲನಿರ್ಗಮನ,
ದ್ವಾರಕಾ ಪ್ರವೇಶ
ಮಕರಂದ ಸುಧಾಮರಿಲ್ಲ;
ಬಲರಾಮನೊಡಗೂಡಿ.
ಬೆಣ್ಣೆ ಕಳ್ಳ ಗೋಪಾಲಕೃಷ್ಣನಲ್ಲ,ಈಗ
ರಾಜಕೀಯ ಮುತ್ಸದ್ಧಿಯಾದ
ಸಂಧಾನದ ಸೋಲಿನಿಂದ
ಪಾರ್ಥಸಾರಥಿಯಾದ!
ಮೋಸ ವಂಚನೆ ಅರಿಯದ ನಂದಕಿಶೋರ
ಕಪಟನಾಟಕ ಸೂತ್ರಧಾರಿಯಾದ
ಕರ್ಣ ದ್ರೋಣರ ಸಾವಿಗೆ ಸುಳ್ಳಿನ ಸೆಲೆಯಾದ
ಕಡೆಗೆ ಬೇಡನಿಂ ಹತನಾದ...