ವಿರೋಧಾಭಾಸ
ಬೆಳದಿಂಗಳಾ ಬಿರುಬಿಸಿಲಲಿ
ಪರಲೋಕದಲಿಬ್ಬರು ಬೆನ್ನಿಗೆ ಬೆನ್ನು ಹಾಕಿ ಬಡಿದಾಡುತ್ತಿರಲು
ಅವರಲ್ಲೊಬ್ಬ ಮತ್ತೊಬ್ಬನಿಗೆ ಮೊಂಡಾದ ಈಟಿಯಿಂ ತಿವಿಯಲು ಮುನ್ನುಗ್ಗಿ
ತನ್ನಲುಗಿನಿಂದ ಗುಂಡೊಂದನ್ನು ಹಾರಿಸಿಯೇಬಿಟ್ಟ!
ಶವಗಳ ಅರಚಾಟ ಕೇಳಿದ ಕಿವುಡು ಪೇದೆಯೊಬ್ಬ
ಈರ್ವರನೂ ತನ್ನ ಬಂದೂಕಿನಿಂದ ತಿವಿ-ತಿವಿದು ಕೊಂದನು
ಇದ ನೀವು ನಂಬಲಾರಿರೆಂದರೆ
ಬೇಕಿದ್ದರೆ ಅಲ್ಲೇ ಇದ್ದ ಕುರುಡನನ್ನೊಮ್ಮೆ ಕೇಳಿ ನೋಡಿ.,
ಆತನಿದಕೆ ಪ್ರತ್ಯಕ್ಷದರ್ಶಿ !!!
ಆಂಗ್ಲ ಮೂಲ : ಅನಾಮಿಕ
ಕನ್ನಡಕ್ಕೆ : ಸುಸಂಕೃತ