ಭಾನುವಾರ, ಆಗಸ್ಟ್ 14, 2005

ಕವಿತೆ [14/08/2005]

ಕವಿತೆ ನಾ ಕಥೆಗಾರನಲ್ಲ... ಹಾಡಿದ್ದು ಹೊಸರಾಗ ಬಿಸಿಲುಗುದುರೆಯ ಬೆನ್ನೇರಿ ಮಾಯಾಮೃಗದ ಬೆನ್ನಟ್ಟಿದಾಗ ಎದುರಾದದ್ದು ಕವಲೊಡೆದ ದಾರಿ ಕಂಡದ್ದು ಏಳು ಬಣ್ಣದ ಕಾಮನಬಿಲ್ಲು ದಕ್ಕಿದ್ದು ಕನ್ನಡಿಯೊಳಗಿನ ಗಂಟು; ಅಳಿಯೆತೆನ್ನ ಗರ್ವ ಮುಗಿಯಿತೊಂದು ಪರ್ವ ಕ್ಷಮಿಸಿ, ನಾ ಕವಿಯಲ್ಲ... ಏನದು ನಿಮ್ಮ ಗುಮಾನಿ? ನಾ ಕೇವಲ ಟಿ.ವಿ. ಧಾರಾವಾಹಿಗಳ ಕಟ್ಟಾಭಿಮಾನಿ!