ಮಂಗಳವಾರ, ನವೆಂಬರ್ 15, 2005

ಆಸರೆ [15/11/05]

ಆಸರೆಯದೇ ಎನಗೀಗ; ದೂರದೂರಿನಲ್ಲೆಲ್ಲೋ ಬೃಂದಾವನದ ಮುಂದೆ ಟವೆಲ್ ಸುತ್ತಿದ ಒದ್ದೆ ಕೂದಲ ಗಂಟು ಗಲ್ಲದರಿಸಿನ,ಹಣೆಬಟ್ಟು ಮುಂಜಾವಿನ ಮಬ್ಬಿನಲ್ಲಿ ಊದುಬತ್ತಿಯ ಹೊಗೆಯೂ ಲೀನ ಘಲ್-ಘಲ್ಲೆನುವ ಆ ಗೆಜ್ಜೆ ಸದ್ದು, ಬೆಳಗ್ಗೆಯಾ ಬಿಸಿ-ಬಿಸಿ ಕಾಪಿಯ ಮದ್ದು! ಆಸರೆಯದೇ ಎನಗೀಗ ಕಾಡುವ ನನ್ನವಳ ನೆನಪುಗಳೇ...