ನೀವು ನೋಡಬಯಸುವ ಪುಟವು ಈಗ ಇಲ್ಲಿ ಲಭ್ಯವಿದೆ:
ಕಾವ್ಯ-ಕೃಷಿ
ಅಡಚಣೆಗಾಗಿ ಕ್ಷಮಿಸಿ.
The content you are looking for is now available on:
ಕಾವ್ಯ-ಕೃಷಿ
Sorry for the inconvenience.
ಶುಕ್ರವಾರ, ನವೆಂಬರ್ 25, 2005
ಸುಮ್ಮನೆ ಗೀಚಿದ್ದು
ಕನ್ನಡ ಆಡಿಯೋ.ಕಾಂ ನಲ್ಲಿ ನಡೆಯುತ್ತಿರುವ "ಕಾವ್ಯಂತ್ಯಾಕ್ಷರಿ" ಆಟದಲ್ಲಿ ಗೀಚಿದ ಹನಿಗಳಿವು.
ಹಾಗೆಯೇ ಎತ್ತಿ ಇಲ್ಲಿ ಹಾಕಿದ್ದೇನಷ್ಟೇ :)
ಕಾಲಾವಧಿ : ಸೆಪ್ಟೆಂಬರ್ ನಿಂದ ನವೆಂಬರ್ ೦೫ ರವರೆಗೆ
*************************************
ತೊಂದರೆಯಾದೀತು ನಿಮಗೆ
ನನ್ನ ಹರುಕು-ಮುರುಕು
ಕಾವ್ಯಧಾರೆಯನೋದಲು
ನಾನರಿಯೆ, ಅದೆಷ್ಟು ಚಂದವೋ
ಈ ನನ್ನ ಕವಿತಾ-ಚೂರುಗಳು
ಅದಕ್ಕೇ ಇರಬೇಕು; ನನ್ನ ಪ್ರೀತಿಯ
ಕಾವ್ಯ - ಬಾಧೆಪಟ್ಟು-ಓಡಿಹೋದಳು!
*************************************
ಪಶ್ಚಾತ್ತಾಪಕ್ಕೂ ಪ್ರಾಯಶ್ಚಿತ್ತಕ್ಕೂ
ವ್ಯತ್ಯಾಸವಿಷ್ಟೇ
ಮೊದಲದು ನೀ ಮಾಡಿದ ಕಾರ್ಯಕ್ಕೆ
ನಿನಗುಂಟಾಗುವ ಮರುಕ
ಎರಡನೆಯದು ನಿನಗುಂಟಾದ ಮರುಕದ
ಪರಿಹಾರಕ್ಕೆ ನೀನೆಸಗುವ ಸತ್ಕಾರ್ಯ!
*************************************
ಕಷ್ಟಸಾಧ್ಯವೇನಿಲ್ಲ
ಮನದಿಂಗಿತವನರಿಯುವುದಕೆ
ಅರಿವ ಮನಸು ಬೇಕಷ್ಟೆ
ಮನದ ಮನಸು ತಿಳಿಯಲು
*************************************
ಒಳಗಣ್ಣಿಗೆಲ್ಲವೂ ಗೋಚರಿಸುವಂತಿದ್ದರೆ
ನಾನಾಗಿರುತ್ತಿರಲಿಲ್ಲವಿನ್ನೂ ಹುಲುಮಾನವ,
ನಾ ಮಾಡಿದ-ಮಾದದಿಹ ಕೃತ್ಯಕ್ಕೆ
ಉಳಿಸಿಕೊಳ್ಳಬೇಕಿದೆ ಈ ನನ್ನ ಮಾನವ!
*************************************
ಕೇಳುವಂತಾಗು ನಿನ್ನ
ಆತ್ಮಸಾಕ್ಷಿಯ ನುಡಿಯ
ನಿನ್ನೆಲ್ಲ ಕರ್ಮಫಲಗಳ
ಜಾತಕವನ್ನು ಒದರುತ್ತದದು
ನಡೆ ನಿನ್ನಾತ್ಮಸಾಕ್ಷಿಯು
ತೋರುವ ಹಾದಿಯಲೇ
ಅದುವೆ ಸುಲಭ ದಾರಿಯು
ಆತ್ಮಸಾಕ್ಷಾತ್ಕರದೆಡೆಗೆ
*************************************
ಜವಾನನಾಗುವೆ ಬೇಕಿದ್ದರೆ
ನಿನ್ನ ಪ್ರೀತಿಯರಮನೆಗೆ
ದಿವಾನಿಯಾಗು ನೀ
ನನ್ನೊಲವಿನ ಗುಡಿಸಲಲಿ
ಎನ್ನ ಸಿರಿಸಂಪತ್ತೆಲ್ಲವೂ
ನಿನ್ನದೇ ಎನ್ನ ಮನದನ್ನೆ
ನನಗಿನ್ನೇನು ಬೇಕು ಹೇಳು
ಬಳಿಯಲಿ ನೀನಿರಲು!!
*************************************
ಸಿರಿವಂತ ನಾ ಕೂಡ
ನನ್ನಾಕೆ ನೀಡಿದ
ಮುತ್ತುಗಳ ಲೆಖ್ಖದಲಿ...
ನಾವಿಬ್ಬರೂ ಕಳೆದು,
ಕೂಡಿಟ್ಟ ಆ
ಮಧುರ ಕ್ಷಣಗಳ ಲೆಖ್ಖದಲಿ...
*************************************
ದು:ಖವೇಕೆ ಮಡುಗಟ್ಟಿಹುದು
ಮೊಳಕೆಯೊಡೆದ ಬೀಜದಂತೆ?
ದು:ಖ ಬೀಜವ ಬಿತ್ತಿದರೆ
ಬೆಳೆದು ಹೆಮ್ಮರವಾಗುವುದು ಖಂಡಿತಾ
ತನ್ನ ಬೇರು-ಬಿಳಲುಗಳಿಂದ
ನಿನ್ನನೇ ಸುತ್ತುವರೆವುದು ನಿಶ್ಚಿತ
ದು:ಖ ಬೀಜವ ನೀ
ಮೊಳಕೆಯಲೇ ಚಿವುಟಿಬಿಡುವಂತಾದರೆ
ಸಕಲವೂ ಸುಖಮಯ
'UTOPIA'ದಂತಹ ರಾಜ್ಯ - ರಾಜ ನೀ ನಿಶ್ಚಿಂತ
*************************************
ಜಗದೋದ್ಧಾರನಂದು
ಆಡಿಸಿದಳೆಶೋಧ
ಸುಪುತ್ರನೆಂದೇ ತಿಳಿದು
ದೇವಕಿಗಿಲ್ಲವಾಯ್ತು
ಆ ಭಾಗ್ಯ
ವಿಧಿಯಾಟವಲ್ಲವೆ ಇದು?
*************************************
ಮಣ್ಣು-ಹೆಣ್ಣು-ಹೊನ್ನು
ಬಿಡಲಾರೆಯಾ ನೀ ಇವುಗಳನ್ನು??
ಭವ-ಭಾರದ
ಸತ್ಯವನರಿಯುವಂತಾಗು
ಇಹ ಲೋಕದಿಂ ಪರಲೋಕದೆಡೆಯ
ನಿನ್ನ ಪಯಣಕೆ ಅದುವೇ
ನಿನ್ನ ಪರವಾನಗಿ ಪತ್ರವೆಂಬುದ
ನೀ ಮರೆಯದಿರು!
*************************************
ಬೇಡನಿಂದ ಹತನಾದ
ಶ್ರೀ ಕೃಷ್ಣನಿಗೇನು ಗೊತ್ತಿತ್ತು
ಮತ್ಸ್ಯದುದರದಲ್ಲಿದ್ದ
ತನ್ನ ಸಾವಿನ ಸೂಚನೆ!!
ಇರುವಷ್ಟೂ ಕಾಲ
ಗೀತಭೋಧಿಸಿದಾತನಿಗೇ ಈ ಪಾಡು;
ಸ್ವಾರ್ಥದ ಮೊಟ್ಟೆಯಾದ
ಹುಲು ಮಾನವ ನೀನ್ಯಾವ ಲೆಖ್ಖ ಬಿಡು??
*************************************
ಬಂದು ಹೋಗುವ ಗೆಳೆಯ-ಬಳಗವೆಷ್ಟೋ
ಈ ನಾಲ್ಕು ದಿನದ ಬದುಕಿನಲಿ
ಭಾವನೆಗಳಿಗಿಲ್ಲಿ ಬೆಲೆಯಿಲ್ಲ
ನನ್ನಾಸೆಗೆಂದೂ ಕೊನೆಯಿಲ್ಲ
ಕಡೆಯನಕ ಉಳಿದದ್ದು ಮಾತ್ರ
ನೀ ಉಳಿಸಿ ಹೋದ ಮುಗಿಯದ ಹುಡುಕಾಟ
*************************************
ಅನ್ನ ದಾನದ ಮುಂದೆ ಇನ್ನು ದಾನವು ಇಲ್ಲ
ತಾಯಿ ದೇವರ ಮುಂದೆ ಇನ್ನು ದೇವರು ಇಲ್ಲ
ತುತ್ತು ಅನ್ನಕ್ಕಾಗಿಯೇ ತಾನೇ
ಬಹುಕೃತ ವೇಷಗಳು
ಸುತ್ತಾಡಿದ ದೇಶಗಳು
ಕಲಿತಾಡಿದ ಭಾಷೆಗಳು!
*************************************
ತಿಳಿಯಾದ ಮನವನು
ಕದಡುವೆ ಏಕೆ?
ತುತ್ತು ಅನ್ನಕ್ಕಾಗಿಯೇ ತಾನೆ
ಎಲ್ಲ ಶ್ರಮ,ಪಾಡು
ನೆಪ ಮಾತ್ರವೇ ಹಸಿರು ಕಾರ್ಡು
ಬಿಡದಿರು ನಿನ್ನ ಬೇರಿನ ಜಾಡು
ಎಂದಿಗೂ,ಎಂದೆಂದಿಗೂ
ಭರತ ಭೂಮಿಯೇ - ನಿನ್ನ ತಾಯ್ನಾಡು
*************************************
ವ್ರತವಲ್ಲವಿದು ಕನ್ನಡ - ಅನವರತ
ಇದ ಹೇಲುವೆ ಕೇಳು ನಾ ಸುಸಂಕೃತ
ಚಿಂತಿಸದಿರು ವೃಥಾ
ಎಳೆ ನೀ ನಿಲ್ಲದ ಕನ್ನಡಮ್ಮನ ರಥ!
*************************************
ಮಾಲೆ-ಮಾಲೆಯಾಯಿತು
ಮೇಘಗಳ ಸಂಘ
ಹಸಿರಾಯಿತು ಎಲ್ಲೇದೆ
ಗಿರಿ-ವನ ಮಾಲೆ ಶೃಂಘ
ಆ ಮೆಘಮಾಲೆಯಲೂ
ನಾ ಕಂಡೆ,
ಗಗನದಲ್ಲೊಂದು ಮೇಘಸಂದೇಶ -
"ಕನ್ನಡವೇ ಸತ್ಯ; ಕನ್ನಡವೇ ನಿತ್ಯಾ"
*************************************
ಮಂಡೂಕ ನೀನಾಗದಿರು
ಈ ಜಗದ ಕೂಪದೊಳು
ಮಂಡೆಯಿಂ ಬಿಸಾಕುವಂತಾಗು
"ನಾನ್" - ಎಂಬ ಭಾವನೆಯ
ಅದುವೇ ಸಾಕ್ಷಾತ್ಕಾರ
ನಿನ್ನಿಂದಾಗಬಹುದಾದ ಜಗದುದ್ಧಾರ
*************************************
ಕೈ ಹಿಡಿಯಷ್ಟೇ ನಾ ಕಂಡಿದ್ದು
ಈ ಭವ ಸಾಗರದಲ್ಲಿ...
ಇಲ್ಲಿ ಕಲಿವವರೂ ಕಲಿಸುವರು
ಕಲಿಸುವವರೂ ಕಲಿಯುವರು
*************************************
ಮೋಕ್ಷದರಮನೆಯ ಹಾದಿಯಲ್ಲಿ
ನಿನ್ನ ಕರ್ಮ-ಫಲಗಳ ಮೆಟ್ಟಿಲುಗಳೆಷ್ಟೋ?
ನೆನಪಿರಲಿ, ಹೆಗಲ ಮೇಲೆ
ಹೊತ್ತಿರುವುದು ನಿನ್ನದೇ ಪಾಪದ ಕೊಡ!
ಆತನನುಗ್ರಹವೊಂದೇ ಸಾಕು
ಸ್ವಾರ್ಥ-ಸಿರಿ ಇನ್ನೇಕೆ ಬೇಕು?
*************************************
ಬಾರಿಸುವಂತಾಗಲಿ ಕನ್ನಡ ಡಿಂಡಿಮ
ಅದರಿಂದಲೇ ನಮಗೆಲ್ಲ ಸಂಭ್ರಮ
ಸ್ಥಾವರವಾಗದಿರಲಿ ನಮ್ಮ ಭಾಷೆ
ಜಗದ ಮೂಲೆ ಮೂಲೆ ಮುಟ್ಟಲು
ಕನ್ನಡವೆಂದಿಗೂ ಜಂಗಮ
*************************************
ಬೇಡ ಬೇಡವಿನ್ನು ಈ ಜಡ...
ಮತ್ತೊಮ್ಮೆ ಬೆಳಗಲಿ...
ಬೆಳೆದು ಎಲ್ಲೆಲ್ಲೂ ತನ್ನ ಕಂಪ ಬೀರುವಂತಾಗಲಿ....
ಬೇಡ ಬೇಡವಿನ್ನು ಈ ಜಡ...
ಎಲ್ಲೆಡೆ ಝಗಝಗಿಸುವಂತಾಗಲಿ
ನಮ್ಮ-ನಿಮ್ಮೆಲ್ಲರ ಕನ್ನಡ
*************************************
ಅಲುಗದಿರೂ ಇನ್ನು ನೀ...
ಇನ್ನೆರಡು ಘಳಿಗೆಯಷ್ಟೇ
ಇಷ್ಟೆಲ್ಲಾ ಕಷ್ಟ-ಕಾರ್ಪಣ್ಯ ಕಂಡ
ಮೂಳೆ-ಮಾಂಸದ ಮಾನವ ದೇಹಕೆ
ಯಕಶ್ಚಿತ್ ಒಂದು
ಹುಳುಕಲ್ಲು ಏನು ತಾನೇ ಮಾಡೀತು!!
[ಪೇಶಂಟ್ ಒಬ್ಬನಿಗೆ ಡೆಂಟಿಸ್ಟರೊಬ್ಬರ ಮೊರಾಲ್ ಬೂಸ್ಟಿಂಗ್ ನುಡಿ!!]
*************************************
ಮಾತನಾಡುತಿತ್ತು ಮನವಂದು
ಹುಚ್ಚೆದ್ದ ಸುನಾಮಿಯಂತೆ...
ಪ್ರೇಯಸಿಯ ಕಂಡಾಕ್ಷಣವದು
ತನು-ಮನದಲ್ಲೆಲ್ಲವೂ ತಲ್ಲಣ...