ನೀವು ನೋಡಬಯಸುವ ಪುಟವು ಈಗ ಇಲ್ಲಿ ಲಭ್ಯವಿದೆ:
ಕಾವ್ಯ-ಕೃಷಿ
ಅಡಚಣೆಗಾಗಿ ಕ್ಷಮಿಸಿ.
The content you are looking for is now available on:
ಕಾವ್ಯ-ಕೃಷಿ
Sorry for the inconvenience.
ಗುರುವಾರ, ಡಿಸೆಂಬರ್ 8, 2005
ಕಾರಣ? [೧೭-೦೧-೨೦೦೪]
ಲಕ್ಷನೀಹಾರಿಕೆಗಳ ದಂಡಿನಂತೆ
ಒಂದೇ ಸಮನೆ ಬೆಳಕಿನಾ ವೇಗದಲಿ
ನುಂಗಂಬಾಕ್ಕಮ್ಮಿನ ಹೈರೋಡಿನಲ್ಲಿ
ಸಂಜೆ ಏಳರ ಟ್ರಾಫಿಕ್ಕು!
ಎಂಟು ಕುದುರೆಬಲಕ್ಕೆ ಸಮವೆಂಬಂತೆ
ಬಲಾಬಲ ಮೀರಿ ತುಳಿಯುತ್ತಿದ್ದಾನೆ
ಹಿಂದುಳಿಯಬಾರದೆಂದುಕೊಂಡ ಮಣಿವಣ್ಣನ್
ತನ್ನಷ್ಟೇ ವಯಸ್ಸಾದ ತನ್ನಪ್ಪನ ಸೈಕಲ್ಲನ್ನು
ಇಪ್ಪತ್ತು ದಾಟಿದ, ಎಣ್ಣೆ ತೀಡಿದ, ಚಿಗುರುಮೀಸೆ ಯುವಕ
ಎಡಭುಜಕ್ಕಂಟಿಕೊಂಡ ಎಡಗೆನ್ನೆ
ಕತ್ತು ಸೊಟ್ಟ, ವಾರೆನೋಟ
ಎಡಬಿಡದೆ ಸೈಕಲ್ ತುಳಿದಾಟ
ತಿರುಮುರುಗನ್ ಲಾರಿಗೆ ಸರಿಸಾಟಿ ಯಾರು?
ವೇಗದಮಿತಿ 60 ಕಿ.ಮೀ.[ಕನಿಷ್ಟ]
ಸೈಕಲ್ ಸವಾರನಂತೆ ಲಾರಿ ಡ್ರೈವರನಿಗೂ
ಬಲಭುಜಕ್ಕಂಟಿಕೊಂಡ ಬಲಗೆನ್ನೆ
ಕತ್ತು ಸೊಟ್ಟ, ವಾರೆನೋಟ
ಲಾರಿ ಮಗುಚಿಕೊಂಡಿದ್ದಷ್ಟೇ ನೆನಪು
ಸೈಕಲ್ ಸಮಾಧಿ,ಡ್ರೈವರ್ ಕೂಡಾ ಇನ್ನಿಲ್ಲ
ಈ ಸಾವುಗಳಿಗೆ ಕಾರಣ ವಿಧಿಯೆ?
ಸತ್ತವರ ದೌರ್ಭಾಗ್ಯವೇ?
ಅಲ್ಲ,ಖಂಡಿತಾ ಅಲ್ಲ
ಪ್ರಪಂಚವನ್ನೇ ಮುಷ್ಟಿಯಲ್ಲಡಗಿಸಲು ಹೊರಟ,
ಎಲ್ಲರಿಗೂ ಎಟುಕಿದ ಆ 501 ರೂಪಾಯಿಯ ಮೊಬೈಲಿನ ಭಾಗ್ಯ!