ದಿನವೂ ನಡೆವ ಸಂತೆಯಾಟದಲಿ
ಕೊಟ್ಟುದೆಷ್ಟೋ ಪಡೆದುದೆಷ್ಟೋ!
ಚಣದಿ ಮುಗಿವ ದೊಂಬರಾಟದಲಿ
ನಿಂತು ನೋಡುವ ಮಂದಿ ಎಷ್ಟೋ?!
ನಾ ಕೊಟ್ಟ ನಾಲ್ಕಾಣೆಗೆ ನೀ ಏನ ಕೊಡುವೆ?
ನೀನಿತ್ತ ಮೂರಾಣೆಗೆ ನಾ ಏನ ಪಡೆವೆ?
ಸ್ವಾರ್ಥವೇ ಮೈವೆತ್ತ ಮಾನವ ನೀ
ಚಣಕಾಲ ಯೋಚಿಸಿ ನೋಡು
ಬಿರು-ಬಿಸಿಲಲಿ ಕುಣಿದು-ದಣಿದ ಜೀವಕೆ
ನಾಲ್ಕಾಸಲ್ಲದಿದ್ದರೇನಂತೆ, ಒಮ್ಮೆ ನಿಂತು
ಮನಃಪೂರ್ವಕವಾಗಿ ಸಂತಸದಿಂದ ಚಪ್ಪಾಳೆ ತಟ್ಟಿಬಿಡು
ನೀ ಕಳೆದುಕೊಳ್ಳುವುದಾದರೂ ಏನನ್ನು?