ಮಂಗಳವಾರ, ಏಪ್ರಿಲ್ 4, 2006

ಬರವಣಿಗೆ

ಬರೆಯಬೇಕೆಂಬ ವಾಂಛೆ ಭೋರ್ಗರೆಯುತಿದ್ದರೂ ಬರೆಯಲು ಸಾಕಷ್ಟು ಗ್ರಾಸವಾದ ವಿಷಯಗಳಿದ್ದರೂ ಕೂತು ಕುಟ್ಟಲಾಗುತ್ತಿಲ್ಲವಲ್ಲ ಕಡೇಪಕ್ಷ ಪುಸ್ತಕದ ಕಡೇಪುಟದಲ್ಲಿ ಗೀಚಲೂ ಆಗ್ತಿಲ್ಲವಲ್ಲವೆಂಬ ನೋವು ತುಕ್ಕು ಹಿಡಿದ ಅಲುಗಿನಂತೆ ಕಿಲುಬು ಕವಿದ ತಾಮ್ರದಂತೆ ಮಸಿಮುಗಿದ ಲೇಖನಿಯಂತೆ ಸಾಣೆ ಕಲ್ಲಿಗೆ ತಿಕ್ಕಿ,ಹುಳಿಯಲದ್ದಿ ಬಿಸಿ ಮುಟ್ಟಿಸಲು ಚಾಲನೆಯೊಂದು ಬೇಕಷ್ಟೆ ಬರೆದೂ ಬರೆದೂ ಓದುಗರ ತಲೆ ಕೊರೆದು ಬಿಡಲು!