ನೀವು ನೋಡಬಯಸುವ ಪುಟವು ಈಗ ಇಲ್ಲಿ ಲಭ್ಯವಿದೆ:
ಕಾವ್ಯ-ಕೃಷಿ
ಅಡಚಣೆಗಾಗಿ ಕ್ಷಮಿಸಿ.
The content you are looking for is now available on:
ಕಾವ್ಯ-ಕೃಷಿ
Sorry for the inconvenience.
ಮಂಗಳವಾರ, ನವೆಂಬರ್ 21, 2006
ಏಕತಾನತೆ
ಹಿಂದೊಮ್ಮೆ ಮುದ ನೀಡುತ್ತಿದ್ದ
ಅನನ್ಯ ಅನುಭವಗಳೆಲ್ಲವೂ
ಇಂದೇಕೋ ಜೀವವಿಲ್ಲದ
ಯಾಂತ್ರಿಕ ನಡವಳಿಕೆಗಳಾಗಿವೆ
ಆಸರೆಗಾಗಿ ಓಡೋಡಿ ಬಂದು
ದಡವನ್ನು ಬಾಚಿ ತಬ್ಬುತ್ತಿದ್ದಲೆಗಳೆಲ್ಲವೂ
ಕಾರ್ಯನಿರತ ಕಾರ್ಮಿಕರಂತೆ ಬಂದು
ಮರಳಿನ ಮೇಲೆ 'ಸಹಿ'ಸಿ ಹೋಗುತ್ತಿವೆ
ಸಂಜೆಮೊಗ್ಗಿನ ಕಂಪನ್ನು ತೀಡಿ ತಂದೊಡ್ಡುತ್ತಿದ್ದ ತಂಗಾಳಿಯೂ
ನಿವೃತ್ತ ಓಲೆಕಾರನಂತೆ ಅರೆ-ಬೇಸರದಿಂದ
ಹೊಗೆ-ತಿಪ್ಪೆ ಹೊಂಗೆ-ಮಲ್ಲಿಗೆಗಳ ಬೇಧಭಾವವಿಲ್ಲದೆ
ಕರ್ತವ್ಯ ನಿರತವಾದಂತೆ ಭಾಸವಾಗುತ್ತಿದೆ
ಲಾಲ್?ಬಾಗಿನ ಮರಮರಗಳಿಂದ ಉದುರುವ
ಸುಗಂಧಭರಿತ ಹೂವುಗಳೂ,ಬಣ್ಣಬಣ್ಣದ ಎಲೆಗಳೂ
ಮುಂಜಾನೆ ಮಬ್ಬಿನಲ್ಲಿ ಎದ್ದೋಡುವವರ ಕಾಲ್ತುಳಿತಕ್ಕೆ ಸಿಕ್ಕು
ಹಾದಿಬದಿಯಲಿ ಗುಡ್ಡೆಹಾಕಿದ ಗೊಬ್ಬರವಾಗಿವೆ
ಅದೇ ಗಾಳಿ ಅದೇ ನೀರು ಅದೇ ಊಟ ಅದೇ ಕೆಲಸ
ಎಲ್ಲವೂ ಅದದೇ ಅನ್ನುವ ಏಕತಾನತೆಯ ಉನ್ಮತ್ತ ಭಾವ
ಮನದೊಳಗಿನ ಭಾವನೆಗಳನೂ ಒಂದೇ ತೆರನಾಗಿಸಿ
ಭಾವನೆಗಳ ಸಾವಿಗಂಜುವ ಭಾವುಕನನ್ನಾಗಿಸಿದೆ