ನೀವು ನೋಡಬಯಸುವ ಪುಟವು ಈಗ ಇಲ್ಲಿ ಲಭ್ಯವಿದೆ:
ಕಾವ್ಯ-ಕೃಷಿ
ಅಡಚಣೆಗಾಗಿ ಕ್ಷಮಿಸಿ.
The content you are looking for is now available on:
ಕಾವ್ಯ-ಕೃಷಿ
Sorry for the inconvenience.
ಮಂಗಳವಾರ, ಜನವರಿ 23, 2007
ಮೌನಿ
ಸ್ನೇಹಿತನೊಬ್ಬನು ಇತ್ತೀಚೆಗೆ ಭಾರತಕ್ಕೆ ವಾಪಸ್ಸಾದ. ಅವನ ಬೀಳ್ಕೊಡುಗೆಗಾಗಿ ಈ ನಾಕು ಸಾಲುಗಳು
ಮೌನಿ
ಜಗದ ಜವಾಬ್ದಾರಿಗಳೆಲ್ಲ ತನ್ನ ತೋಳ ಮೇಲೆಂಬಂತೆ
ಸುರು-ಸುರುಳಿಯಾಗಿ ತೇಲಿಬಿಟ್ಟಾಗ
Marlboro Redನ ಹೊಗೆ ಗಾಳಿಯಲ್ಲಿ ಲೀನ
-ಹೆಚ್ಚು ಮಾತಿಲ್ಲದ ಮೌನಿ
ಅಮಾವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ
ತುಟಿಯಂಚಲಿ ನಗು ಕಂಡರದೇ
ಗೆಳೆಯ ಬಳಗಕ್ಕೆಲ ಪರಮಾಶ್ಚರ್ಯ
- ಗಟ್ಟಿಯಾಗೊಮ್ಮೆ ನಕ್ಕುಬಿಡು ಮೌನಿ
ನೀರು(!?) 'ಕುಡಿ'ದಷ್ಟೆ ಸುಲಭ,
ಕುಡುಕರನೂ ನಾಚಿಸಿ ನೀರಾಗಿಸುವವ
ಸಲೀಸಾಗಿ ಪೀಪಾಯಿಗಳನೇ ಸದ್ದಿಲ್ಲದೇ ಕುಡಿದೇಳುವವ
ಮನಪೂರ ಮಾತಾಡಿಬಿಡು ಮೌನಿ
ಬೀರುವಿನಲ್ಲಿ ಮಡಿಚಿಟ್ಟ ಜೀನ್ಸುಗಳೆರಡು
ನುಸಿಗುಳಿಗೆಯೊಡನೆ ಬಾಳುವ ಕೋಟುಗಳಿನ್ನೆರಡು
ಸದಾ Formalsನಲ್ಲೆ ನಲಿಯುವವ
ಮೊನ್ನೆ ಶುರುವಾದ ಛಳಿಗೂ ಛಳಿಯಾಗಿರಬಹುದೇನೋ
ಇವನನ್ನಲ್ಲಾಡಿಸಲಾಗಲಿಲ್ಲ - ಒಮ್ಮೆ ಮೈಪೂರ ಕೊಡವಿ ನಡುಗಿಬಿಡು ಮೌನಿ
ಎನಾದರಾಗಲಿ, ಬರುವುದೆಲ್ಲ ಬರಲಿ
ಭವಬಂಧನದ ಭಾರವ ಕೆಳಗಿಳಿಸು ಕೊಂಚ
ಹೊಗೆ-'ಕುಡಿ'ಯುವುದ ಕಡಿಮೆ ಮಾಡಿ
ನಕ್ಕು ನಲಿದಾಡು ಆಗೊಮ್ಮೆ ಈಗೊಮ್ಮೆ
ಆಗದಿದ್ದರೇನಾಯ್ತು ಬಿಡು – ನೀ ಬದಲಾಗದಿರು ಮೌನಿ!