ಶುಕ್ರವಾರ, ಮಾರ್ಚ್ 2, 2007

ಮೂಕಸಾಕ್ಷಿ

ಉಕ್ಕಿ ಉಕ್ಕಿ ಬಂದು ದಡವನ್ನು ಮುತ್ತಿಕ್ಕುತ, ಅವಿರತವಾಗಿ ಬೇಸರವಿಲ್ಲದೇ ಏರಿಳಿಯುವ ಈ ಸಾಗರದಲೆಗಳು ಸಾಗರದಿಂದ ಆವಿಯಾದ ಜಲವೆಲ್ಲವೂ ಮೋಡವಾಗಿ, ಕರಗಿ ಸುರಿವಾಗ ಭೂಮಿಗೇ ಸಮಾಧಾನ ಹೇಳುವ ಈ ಮಳೆಯು ಬರಡು ನೆಲ ಧೂಳೆಂದು ಗೊಣಗಾಡುವಾಗ, ಇಳೆಗೆ ಮಳೆ ಬಿದ್ದ ಕೂಡಲೇ ಘಮಗುಡುವ ಈ ಒಣ ಭೂಮಿಯು ಒಣ ಭೂಮಿಗೆ ನೀರೆರೆದು ಬೀಜ ಬಿತ್ತಾಗ, ಬೇರು-ಬಿಳಲ ಚಾಚಿ ಭೂಮಿಯನೇ ಬಾಚಿ ತಬ್ಬುವ ಈ ಮರವು ಮರದಾಸರೆ ಬಯಸಿ ಬಂದ ಸಕಲ ಜೀವಸಂಕುಲಗಳಿಗೂ, ಸದಾ ಸ್ವಾಗತ ಕೋರುವ ಹಸಿರೆಲೆ-ಹಣ್ಣಿನ ಈ ಗೂಡುಗಳು ಅಮ್ಮನ ಗೂಡೊಳಗೆ ಬೆಚ್ಚಗೆ ಮಲಗಿದ್ದು, ಹುಟ್ಟಿದಾಕ್ಷಣ ಕಿರ್ರ್ ಎಂದು ಕೂಗಿ ಅಳುವ ಹಸನ್ಮುಖಿ ಹಸುಳೆಯು ಸೃಷ್ಟಿಯಲ್ಲಡಗಿರುವ ಈ ದಿವ್ಯ- ಮಾಂತ್ರಿಕ ಶಕ್ತಿಗೆ ಮೂಕಸಾಕ್ಷಿಗಳು