ಸೋಮವಾರ, ಮೇ 28, 2007

ಬದಲಾವಣೆ

ಇಷ್ಟು ದಿನವೂ ತಿಂದುಂಡು ಅಂಡಲೆಯುತಿದ್ದ ಹೆಸರಿಲ್ಲದ ಗ್ರಹದಂತೆ ನನ್ನದೇ ಆದ ಕಕ್ಷೆ ನನಗೆ ಈಗೇನು ಬದಲಾವಣೆ? ಸೂರ್ಯದೇವನಂಥ ಅಪ್ಪ ಕ್ಷಮಯಾ ಧರಿತ್ರಿ ಅಮ್ಮ ಚಂದಿರನಂಥ ತಂಗಿ ಒಟ್ಟಿಗೆ ಎರಡನೇ ಹೊಸಮನೆಯಲ್ಲಿರುವಾಗ ನಾನೂ ಹತ್ತಿರದೊಂದು ಕಕ್ಷೆಗೆ ಬರಬೇಕು 'ಮಂಗ'ಳನಾಗದಿದ್ದರೂ ಸರಿಯೆ ಸೌರವ್ಯೂಹದೊಳಗೆ ಶನಿಯಾದರೂ ಆಗಲೇಬೇಕು! [:p] [ಬೆಂಗಳೂರಿನಲ್ಲಿ ಹೊಸಮನೆಯೊಂದನ್ನು ಬಾಡಿಗೆಗೆ ಪಡೆದು ಅಪ್ಪ-ಅಮ್ಮ ಎಲ್ಲರೂ ಇಲ್ಲಿಗೇ Shift ಆದ ಹಿನ್ನೆಲೆಯಲ್ಲಿ ತೋಚಿದ್ದನ್ನ ಇಲ್ಲಿ ಗೀಚಿದ್ದೇನಷ್ಟೇ! :)]