ಮಾತೇ ಮುತ್ತು....ಮೌನ ಬಂಗಾರ
ಮಾತಿಗಿಲ್ಲಿ ಬಡತನವಿಲ್ಲ
ಕೇಳುವ ಕಿವಿಗಳೆರಡಿದ್ದರಾಯ್ತು
ಮಾತನಾಡುವವರಿಗೇಕೆ ಚೌಕಾಸಿ
ಕಾಸಿಗೊಬ್ಬ ಕೊಸರಿಗೊಬ್ಬ!
ಸರಳ-ನೇರ,ಕಟುಸತ್ಯ,ಮಧುರ
ಲೋಕಾರೂಢಿ,ದೇಶಾವರಿ
ಆಶ್ವಾಸನೆ,(ಬಿಟ್ಟಿ) ಉಪದೇಶ
ಹತ್ತು ಹಲವು ರೂಪವದಕೆ
ಮಾತು ಆಡಿದರೇ ಹೋಯ್ತು
ಮುತ್ತು ಒಡೆದರೇ ಹೋಯ್ತು
ಮೂಕಪ್ರೇಕ್ಷಕರಿಗೇನು ಬಿಡಿ
ಕಿಲುಬುಕಾಸಿಗೂ ಇಲ್ಲವಿಲ್ಲಿ ಕುತ್ತು
ಅಲ್ಲಿಗೀ ಸಮೀಕರಣ ಸರಿಯೇ ಬಿಡಿ
ಮಾತು ಮುತ್ತಾದ ಮೇಲೆ
ಮೌನ ಮುತ್ತುಗಳ ಬಿಗಿದಪ್ಪಿ
ಬೆಲೆ ತಂದುಕೊಡುವ ಬಂಗಾರ!
ಶುಕ್ರವಾರ ೧ ಜೂನ್ ೨೦೦೭


4 ಅನಿಸಿಕೆಗಳು
ನಿಮ್ಮ ಹಾಡು ನನಗೆ ಮೇಚಿchದೆ, ಬಹಳಷ್ಟು ಬ್ಲೋಗುಗಲ್ಳನೂ ಇತ್ತೀಚೆಗೆ, ನಾನು ಒಡಲಾರಂಬಿಸಿದ್ದೀನಿ. ಇದೀಗ, ಈ ಕವನವೂ ಬಹಳ ರುಚಿಕರವಾಗಿದೆ.
ಇನ್ನೊಂದು ಪ್ರೇಷ್ನೆ, ನೀವು ಕನ್ನದಲ್ಲಿ ಬರೆಯಲು ಯಾವ ಸೊಫ್ಟ್ವಾರೆ ಉಪಯೋಗಿಸುತ್ತೀರಿ? ಸ್ವಲ್ಪ ತಿಳಿಸಿರಿ...
ಇಪ್ಪತು ನಾಲ್ಕು ಘಂಟೆ, ಮಾತಡುವ ನನಗೆ, ನಿಮ್ಮ ಕವನಿಂದ ಬಹಳ ಇನ್ಸ್ಪಿರೇಷನ್ ಹುಟ್ಟಿದೆ. :)
ಹೌದು, ನಾನು ನಿಮ್ಮ ಹಾದಿಗ ನನ್ನ ಹಾರ್‍ತಿಕ ಅಭಿವಾದಗಳನ್ನು ಅರ್ಪಿಸುತ್ತಿನಿ.
P.S ನಾನು ನನ್ನ ಕನ್ನಡಕ್ಕೆ http://quillpad.in/knannada/ ಅನ್ನುವ ಒಂದು ಸೈಟ್ ಅನ್ನು ಉಪಯೋಗಿಸುತ್ತೀನಿ. ಹೊಸಬರಿಗೆ, ಅದು ಬಹಳ ಉತ್ತಮ.
Anonymous mattu Sugreeva : nimma meccugege nanna vandanegalu.
nanu modalinindaloo barahavannu upayogistaa bandiddene...haage barahada sarala balakeya bagge ond blog entry kooda hakiddene nodi nimage upayoga adre tilisi
http://susheelsandeepmurali.blogspot.com/2006/11/blog-post.html
it is superb
keep it up
ಒಂದು ಕಮೆಂಟನ್ನು ಪೋಸ್ಟ್ ಮಾಡಿ
ಒಡನಾಡಿ ಕೊಂಡಿಗಳು
ಲಿಂಕ್ ರಚಿಸಿ