ಪ್ರಸ್ತಾಪ
ಭಾವಬಿಂದುಗಳೊಡನೆ ಚುಕ್ಕಿಯಾಟ
ನಾಲ್ಕು ಗೀಟುಗಳೊಂದಿಗೆ
ಮನೆಯೊಂದರನಾವರಣ
ಹೆಸರಿನಕ್ಷರದೊಡನೆ ನಾಮಕರಣ!
ಸರದಿಯಂತೆ ಆಡಬೇಕಿಲ್ಲಿ ನಾನೊಮ್ಮೆ ನೀನೊಮ್ಮೆ,
ಆದ್ಯತೆ ಆವಶ್ಯಕತೆಗಳಿಗನುಸಾರ
ಹೇಗಾದರೂ ಸರಿಯೆ, ಎಷ್ಟಾದರೂ ಸರಿಯೆ
ಗೀಟೆಳೆದು ಮನೆತುಂಬಿಸಿಕೊಂಡರಾಯ್ತು
ಜೇಡ ಕಟ್ಟಿದ ಮೂಲೆಯಲ್ಲಿಷ್ಟು
ನೆನಪಿಗೇ ಬಾರದ ಹೆಸರುಳ್ಳ ಮನೆಗಳು
ಮತ್ತೆ ಅಲ್ಲಲ್ಲಿ ಅಷ್ಟಿಷ್ಟು ಗುರುತು ಪರಿಚಯದ
ನೆಂಟರಿಷ್ಟರ ಕುರುಹುಗಳು
ಕಡೇ ಸಾಲಿನ ಕೊನೆಯಲ್ಲೊಂದು,
ಮೂರು ಗೀಟು ಬಿದ್ದ ಜಾಗವೊಂದಿದೆ
ನಾಲ್ಕನೆಯದನ್ನು ನಿನ್ನ ಕೈಯಾರೆ ನೀನೇ
ಎಳೆದು ನಿನ್ನ ಮನೆಯಾಗಿಸಿಕೊಳ್ಳೇ ಗೆಳತಿ...
ಶುಕ್ರವಾರ ೨ ನವೆಂಬರ್ ೨೦೦೭


7 ಅನಿಸಿಕೆಗಳು
wowwww! chukkiyaaTada metaphor'na beLsirO reeti thumba chennaagide sush,u seem to be back with a bang literally!! looking fwd to read more
Nice poem Sushil. ಭಾವಬಿಂದುಗಳೊಡನೆ ಚುಕ್ಕಿಯಾಟ good expression. Somehow here and there I felt expressions were too descriptive/clarifactory (which is unlike the nature of a poem). OttAre suMdaravAda kavana.
ಹೇಗಾದರೂ ಸರಿಯೆ ಎಷ್ಟಾದರೂ ಸರಿಯೆ
ಗೀಟೆಳೆದು ಮನೆತುಂಬಿಸಿಕೊಂಡರಾಯ್ತು
ಕಡೇ ಸಾಲಿನ ಕೊನೆಯಲ್ಲೊಂದು
ಮೂರು ಗೀಟು ಬಿದ್ದ ಜಾಗವೊಂದಿದೆ
ನಾಲ್ಕನೆಯದನ್ನು ನಿನ್ನ ಕೈಯಾರೆ ನೀನೇ
ಎಳೆದು ನಿನ್ನ ಮನೆಯಾಗಿಸಿಕೊಳ್ಳೇ ಗೆಳತಿ...
sAlugaLu adara bhAvukatege, simplicity gAgi tuMbA iShTavAyitu. Keep it up.
cute imagination :)
chennagide....
namaskaar guru...
Superb aagide...
Nija hELo yaaradu chukkiyaaTada huDugi ??
nenu Igalu yaaru illa barE imagination aMdre naan naMbakilla.
detail aagi amEle bareetini.15 dina aadamele offfice ge baMdiddini...svalpa kelasa ide.
San
ಈ ಕವಿತೆಯ ಬಗ್ಗೆ ಮನದ ಮಾತುಗಳನ್ನ ಬರೆಯಲೆಬೇಕೆಂದು ಕೊಂಡಾಗ ಕಣ್ಮುಂದೆ ಸುಳಿದಿದ್ದು ಹೈ-ಸ್ಕೂಲ್ ನಲ್ಲಿದ್ದಾಗ ಕವಿತೆಯ ಬಗ್ಗೆ ಸ?ಾರಂಶ ಬರೆಯುತ್ತಿದ್ದ ವಿಧಾನ.
ಇಗೋ ಇಲ್ಲಿದೆ ಅಂತಹುದೆ? ಒಂದು ಕಿರು ಪ್?ರಯತ್ನ. ಮುಠ್ಠಾಳತನವೋ ಮರುಳತನವ?ೋ ಓದಿ ಕ್ಷಮಿಸಿ.ಸುಶೀಲ್ ಬಹುಶಃ ನೀನು ಈ ಅರ್ಥದಲ್ಲಿ ಬರೆ?ದಿಲ್ಲದೇ ಇರಬಹುದು ..ಅದರೇ ಕಾವ್ಯ ಓದುಗರ ಮನ ಮುಟ್ಟುವುದು ಓದುಗನ ಭಾವನೆಯ ಮ?ೇಲೆ ನಿರ್ಧರಿತ ಎಂಬ ನಿರ್ಧಾರದ ಮೇಲೆ ನಿನ್ನ ಕಾವ್ಯದ ಸಾರಂಶ ಬರೆಯುವ ದುಸ್ಸಾಹಸ ಮಾಡುತ್?ತಿದ್ದೇನೆ. ಇಷ್ಟವಾಗದಿದ್ದರೆ ಓ?ದಿದ್ದನ್ನು ಮರೆಯುವ ಪ್ರಯತ್ನ ಮಾಡಿ ಕ್ಷಮಿಸಿಬಿಡು ( ಕಾವ್ಯದ ಮೂಲ ಉದ್ದೇಶವನ್ನು ಕೊಂದಿದ?್ದಕ್ಕೆ ).
ಪ್ರಸ್ತಾಪ...
ಕವಿ ತಮ್ಮ ಕವಿತೆಯ ಮೊದಲನೆಯ ಪ್ಯಾರದಲ್ಲಿ ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ಎಲ್ಲರು ಒಂದಲ್ಲ ಒಂದು ದಿನ ಆಡಿರುವಂತಹ ಚುಕ್ಕಿಯಾಟವನ್ನು ವಿವರಿಸುತ್ತಾರೆ. ಮೇಲ್ನೋಟಕ್ಕೆ ಸರಳವಾದ ಆಟದ ನಿಯಮ?ಗಳ ವಿವರಣೆಯಂತೆ ಕಾಣುವ ನಾಕು ಸಾಲುಗಳು ಚುಕ್ಕಿಯಾಟದ ನಿಯ?ಮಗಳನ್ನಷ್ಟೆ ಅಲ್ಲದೆ ಕವಿ ಮಾಡ ಹೊರಟಿರುವ ಪ್ರಸ್ತಾವನೆಯ ಪ?್ರಸ್ತಾಪ ಮಾಡುತ್ತದೆ. " ಭಾವಬಿಂದ?ುಗಳೊಡನೆ ಚುಕ್ಕಿಯಾಟ ನಾಲ್ಕು ಗೀಟುಗಳೊಂದಿಗೆ" ...ಎನ್ನುವಾಗ ಈ ಚುಕ್ಕಿಯಾಟ ಮಾಮ?ುಲಿಯ ಚುಕ್ಕಿಯಾಟವಲ್ಲ ಬದಲಾಗಿ? ಇದು ಬಿಡಿ ಬಿಡ?ಿ ಭಾವನೆಗಳನ್ನು ಒಂದು ಗೂಡಿಸುವ ಜೀವನದ ಬ?ೇರೊಂದು ಮಜಲನ್ನು ತೋರಿಸುತ್ತದ?ೆ. ಅಷ್ಟಕ್ಕೆ ನಿಲ್ಲದೆ ಒಂದನ್ನೊಂದು ಸೇರಿಕೊಂಡ ಭಾವನೆಗಳು ಮನದಲ್ಲೆ ಕಟ್ಟಿಕೊಡುವ ಕನಸ?ುಗಳ ಮನೆಯೊಂದನ್ನು ಅದಕ್ಕೆ ಹೆಸರನ್ನು ಇಟ್ಟುಕೊಳ್ಳುವ ಖುಶಿಯನ್ನು ತೋರಿಸಿಕೊಡುತ್ತದೆ "ಮನೆಯೊಂದರ ಅನಾವರಣ ಹೆಸರಿನ ಅ?ಕ್ಷರದೊಡನೆ ನಾಮಕರಣ" ಎನ್ನುವ ಸಾಲುಗಳು.
ಸರಳವಾಗಿ ಪ್ರಾರಂಭವಾಗುವ ಕವಿತೆಯೊಂದು ಅರ್ಥೈಸಿಕೊಳ್ಳಲು ಸುಲಭವಲ್ಲದ ಜೀವನದ ರೀತಿ/ನೀತಿಯ ಸುತ್ತ ಸುತ್ತಿಕೊಳ್ಳುತ್ತ ಹೋಗುವುದನ್ನ ಎರಡನೆಯ ಪ್ಯಾರದಲ್ಲಿ ನೋಡಬಹುದು.ಇಲ್ಲಿ "ಹೇಗಾದರೂ? ಸರಿಯೆ ..ಗೀಟೆಳೆದು ಮನೆತುಂಬಿಸಿಕೊಂಡರಾಯ್ತು" ಅನ್ನುತ್?ತಲೆ ಅದು ಅಷ್ಟು ಸರಳವಲ್ಲ , ಆಡುವಾ ಆಟ ಆದ್ಯತೆ ಆವಶ್ಯಕತೆಗಳ ಅನುಸಾರ ಸಾಗಬೇಕಾಗುತ್ತದೆ/ಸಾಗುತ್ತದೆ ಎನ್ನುವ ಗಹನ ಸತ್ಯ?ವನ್ನು ಸರಳವಾಗಿ ಮನದಟ್ಟು ಮಾಡಿಕೊಡುತ್ತಾರೆ ಕವಿ.ಬದುಕಿನಾಟದಲ್ಲಿ ಸಮಾನತೆಯ,ಸಮಾನ ಅವಕಾಶಗಳ ಕನಸ ಕಟ್ಟಿಕೊಡುತ್ತಾರೆ , ಆಟದಲ್ಲಿ ಇಬ್ಬರಿಗು? ಮುಕ್ತ ಅವಕಾಶ ನೀಡುವಲ್ಲಿ ಇದನ್ನು ಮನದಟ್ಟು ಮಾಡಿಸುತ?್ತಾರೆ.
ಪ್ರಸ್ತಾಪದ ಪೀಠಿಕೆ ಅಲ್ಲಿಗೆ ನಿಲ್ಲುವ?ುದಿಲ್ಲ ..ಚುಕ್ಕಿ ಆಟದ ಜೊತೆಜೊತೆಗೆ ಜೀವನದ ಮತ?್ತಷ್ಟು ಅಸ್ಪಷ್ಟ ಮಗ್ಗಲುಗಳನ್?ನು ಮುಟ್ಟುತ್ತದೆ ,ಅದರ ಕುರಿತು ಸ್ಪಷ್ಟ ಮಾತುಗಳನ್ನಾಡುತ್ತದೆ ಕವಿ ವಾಕ್ಯಗಳು.ಜೇಡ ಕಟ್ಟಿದ ಮೂಲೆ ಸಮಯದ ಜೊತೆಗೆ ಮರೆತು ಹೋದ ಹಳೆಯ ಭಾವನೆಗಳನ್ನು ಮತ್ತು? ನೆಂಟರಿಸ್ಟರು ನಮ್ಮ ಅನುಭವಕ್ಕೆ ಅರ್ಧಂಬರ್ಧ ಬಂದ ಅವರಿವರ ಭಾವನೆಗಳನ್ನು? ಸೂಕ್ಷ್ಮವಾಗಿ ಸೂಚಿಸುತ್ತದೆ.ಇಷ್ಟೆಲ್ಲ ಪೀಠಿಕೆಯ ಅಗತ್ಯವಿದೆಯ ಪ್ರಸ್ತಾವನೆಗೆ ಅನಿಸುತ್ತಿರುವಾಗಲೆ ಎಲ್ಲೊ ಒಂದು ಕಡೆ ಮುನ್ನುಡಿ ಬರೆಯುವ ಮುಂಚೆ ಇರ?ಬೇಕಾದ ಹೊರನೋಟ ಮತ್ತು ಒಳನೋಟಗಳನ್ನು ಜೇಡ/ನೆಂ?ಟರುಗಳ ಮೂಲಕ ಕವಿ ಮಾಡಿಕೊಡುತ್ತಿದ್ದರಾ ..?? ಎಂಬ ಭಾವನೆ ಮನದಲ್ಲಿ ಸುಳಿದು ಹೋಗುವುದು.
ಸರಳ ಚುಕ್ಕಿ ಆಟದ ನಿಯಮಗಳೊಂದಿಗೆ ಪ್ರಾರಂಭಿಸಿ ಜೀವನ ಭಾವ ಬಿಂದುಗಳನ್ನು ಜೋಡಿಸು?ತ್ತ ಹೋಗುವ ಕವಿ ಎಲ್ಲೊ ಒಂದೆಡೆ ನಮ್ಮೆಲ್ಲರ? ಮನದ ಭಾವನೆಗಳ ಕದವನ್ನು ನಮ್ಮರಿವಿಗೆ ಬರದ?ೆಂತೆ ತೆರೆದಿಡುತ್ತಾರೆ ..ಮುಂದೆ? ಮಾಡಲಿರುವ ಪ್ರಸ್ತಾವನೆಗೆ! ಕಡೇ ಸಾಲಿನ ಕೊನೆಯಲ್ಲೊಂದು ನಾನ?ು ಕಟ್ಟಿಕ್ಕೊಂಡ ಅಪೂರ್ಣ ಕನಸಿದೆ ಅದನ್ನ ನಿ?ನ್ನ ಮನೆಯನ್ನಾಗಿ ಮಾಡಿಕೊ ಎಂದು ಆರ್ಧ ಭಾವದಿಂದ ತನ್ನ ಕನಸ್ಸನ್ನ ಗೆಳತಿಯ ಕೈಗೆ ಕೊಟ್ಟಂತೆ ಮಾಡಿ "ಗೆಳತಿ ಕವಿಯ ಕನಸಿನಲ್ಲಿ ಗೀಟನ್ನೆ?ಳೆದು ಮನೆಕಟ್ಟಿಕೊಳ್ಳುವ ಮುನ್?ನವೆ ಒದುಗರ ಮನಮುಟ್ಟುತ್ತಾರೆ ಕವಿ ತಮ್ಮ ಭಾವ?ನೆಗಳನ್ನು ವ್ಯಕ್ತಪಡಿಸಿದ ಈ ರೀತಿಯಿಂದಾಗಿ".ಕವಿ ಹೇಳುವ ಹಾಗೆ ಇದು ಅವರ ಕನಸ?ಿನ ಕೊನೆ ಸಾಲಿನಂತೆ ಎಲ್ಲು ಕಂಡು ಬರುವುದಿಲ?್ಲ ಬದಲಾಗಿ ಇದು ಭಾವಬಿಂದುಗಳೊಡಿನಿನ ಮತ್ತೊಂದು ಚುಕ್ಕಿಯಾಟಕ್ಕೆ ಪ್ರಸ್ತಾಪದಂತೆ ಕಂಡು ಬರುತ್ತದೆ.ಹಾಗಾಗಿ ಕಾವ್ಯದ? “ಪ್ರಸ್ತಾಪ” ಎಂಬ ಹೆಸ?ರಿನ ಸಮಂಜಸತೆ ಎದ್ದು ಕಾ?ಣುತ್ತದೆ.
-santhosh
ivr comments odi swalp swalpa artha aagtide :-D
haudu yaaru helo aa hudgi
ತುಂಬಾ ಸೊಗಸಾಗಿದೆ.
ಒಂದು ಕಮೆಂಟನ್ನು ಪೋಸ್ಟ್ ಮಾಡಿ
ಒಡನಾಡಿ ಕೊಂಡಿಗಳು
ಲಿಂಕ್ ರಚಿಸಿ