ಕನವರಿಕೆ

ಡಾವಿಂಚಿ ಚಿತ್ರಿಸಿದ
ಮೊನಾಲಿಸಳ ನಗೆ,
ರವಿವರ್ಮ ಬರೆದ
ಹೆಂಗಳೆಯರ ಹಾಗೆ

ನನ್ನವಳ ಮುಖಾರವಿಂದವನೂ-
ಚಿತ್ರಿಸಿ,ಬಣ್ಣಗಳಿಂದ ಮೇಳೈಸಿ
ಅದಕ್ಕೊಪ್ಪುವ ಚಿನ್ನದ ಬಣ್ಣದ
ಚೌಕಟ್ಟೊಂದನ್ನು ಹುಡುಕಿ ತಂದೆ

ಮನದಾಳದ ಮನೆಯ
ಸ್ಮೃತಿಪಟಲದ ಗೋಡೆಗೆ
ತಗುಲಿ ಹಾಕೋಣವೆಂದರೆ
ನೆನಪುಗಳ ಮೊಳೆಯೊಂದೂ ಇರಲಿಲ್ಲ!

ಲೇಬಲ್‌ಗಳು: , , ,

ಬುಧವಾರ ೩ ಅಕ್ಟೋಬರ್ ೨೦೦೭

4 ಅನಿಸಿಕೆಗಳು

  • hangandre?

    Blogger ಸ್ವರ ( 9:42 PM, October 03, 2007 )  delete:_ _

  • ನೆನಪುಗಳ ಮೊಳೆ..ಚೆನ್ನಾಗಿದೆ ..

    ಇತ್ತೀಚೆಗೆ ಯಾಕೋ ಮೊಳೆ ನಿನ್ನನ್ನ ಕಾಡ್ತ ಇದೆ ಅನಿಸುತ್ತೆ ಹೌದಾ.. [:)]

    Blogger ಜಯಂತ್ ( 9:13 AM, October 04, 2007 )  delete:_ _

  • ನೆನಪು ಮಾಡ್ಕಳ್ಳಿ ನೆನಪು ಸಿಕ್ಕೇ ಸಿಗುತ್ತೆ:)
    ಚೆನ್ನಾಗಿದೆ ಕವಿತೆ

    Blogger VENU VINOD ( 2:14 PM, October 07, 2007 )  delete:_ _

  • ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು.
    @ಸ್ವರ : ಕವನದ ಅರ್ಥ ಕೇಳ್ತಿದೀರ? :P

    @ಜಯಂತ್ : ಹೆ ಹೆ ಹೆ...ಹಾಗೇನಿಲ್ಲ..ನಿಮ್ಮ ಜೊತೆ ಮಾತಾಡೋವಾಗ ಕನವರಿಸಿಕೊಂಡಿದ್ದಕ್ಕೆ ಒಂದು ರೂಪ ಕೊಟ್ಟು ಇಲ್ಲಿ ನೇತು ಹಾಕಿದ್ದೇನಷ್ಟೆ! :)

    Blogger Susheel - ಸುಸಂಕೃತ ( 2:37 PM, October 08, 2007 )  delete:_ _

  • ಒಂದು ಕಮೆಂಟನ್ನು ಪೋಸ್ಟ್ ಮಾಡಿ

    ಒಡನಾಡಿ ಕೊಂಡಿಗಳು

    ಲಿಂಕ್ ರಚಿಸಿ