ಭಾನುವಾರ, ಫೆಬ್ರವರಿ 3, 2008

ವಾಸ್ತವ

ನೆನಪುಗಳನ್ನೇ ಮೆಲುಕು ಹಾಕುತ್ತ ಒಂದು ಕವನ ಲೆಕ್ಕಕಿರಲೆಂದು ಗೀಚಿದ ಹಾಳೆಯನ್ನೇ ನಿನ್ನ ಕೈಗಿತ್ತೆ ನೀನೋ, ಅದು ನಿನಗಾಗಿಯೇ ಬರೆದ, ನಿನ್ನದೇ ಕವನವೆಂಬಂತೆ ಎದೆಗೊತ್ತಿಕೊಂಡು ಕಣ್ಮುಚ್ಚಿ ಒಮ್ಮೆ ನಿಟ್ಟುಸಿರುಗೈದೆ! ಆ ನಿನ್ನ ಬಿಸಿಯುಸಿರು ನನಗೂ ತಟ್ಟಿ, ಕಣ್ಣಂಚಿನಲ್ಲಿ ಕಾದು ಕುಳಿತ ಕಂಬನಿಯು ನಿನ್ನಾ ಕೆನ್ನೆಯ ಸವರಿ,ಗಲ್ಲದ ತುದಿಗೆ ಬರುವಷ್ಟರಲ್ಲಿ ಸಪ್ತಸಾಗರದಾಚೆಗಿನ ಹೊಸ ಬದುಕಿನೆಡೆಗೆ ನನ್ನ ಪಯಣ ಶುರುವಾಗಿತ್ತು!