ಸರಿಯಿಲ್ಲ...ಸರಿಯಿಲ್ಲ...ಸರಿಯಿಲ್ಲ...
ದೂರವಾಣಿ ಸಿಕ್ಕುತ್ತಿಲ್ಲ...
ಕಾಗದಗಳು ತಲುಪುವುದೇ ಇಲ್ಲ...
ಎರಡು ತಿಂಗಳಿನಿಂದ ಅಪ್ಪ ಅಮ್ಮನ ಕೂಡ
ನಗುನಗುತ ಮಾತನಾಡಿದ ನೆನಪೇ ಇಲ್ಲ
ಸಂಪರ್ಕದ ಹಾದಿ ಸುಗಮವಾಗಿರಬೇಕಲ್ಲ!!
ಅಪ್ಪ-ಅಮ್ಮನ ಪ್ರೀತಿಯ ಮಾತುಗಳಿಂದ
ವಂಚಿತರಾದ ಮಕ್ಕಳೆಲ್ಲ
ಅದೇ ಊರಿನ ವೃದ್ಧಾಶ್ರಮದ ವಿರುದ್ಧ
ದಾವೆ ಹೂಡಿದ್ದಾರಂತಲ್ಲ!!!