ಬುಧವಾರ, ಏಪ್ರಿಲ್ 30, 2008

ನಾಳೆ

ನೆನ್ನೆಯ ನಾಳೆಯೊಂದು ಯೋಚಿಸಿತು ಮೊನ್ನಿನ ನಾಳೆ ಹೀಗೆ ಮಾಡಿದ್ದರೆ ನಾಳೆಗಳ ನೆನ್ನೆಗೆ ಈ ಗತಿ ಬರುತ್ತಿರಲಿಲ್ಲವೇನೋ!? ಆದರೆ, ನೆನ್ನೆಗೂ ನೆನ್ನೆಗಳಿದ್ದುದ ಏಕೆ ಮರೆತುಹೋಯಿತೋ!? ಇದಕ್ಕುತ್ತರವಾಗಿ ಎಸ್ಸೆಮ್ಮೆಸ್ ಮೂಲಕ ಗೆಳೆಯ ಸಂತೋಷ ಕಳಿಸಿದ ನಾಕು ಸಾಲುಗಳು ಹೀಗಿವೆ: ಇಂದು ನಾಳೆಯ ನೆನ್ನೆಯೊಂದು ಯೋಚಿಸಿದ್ದರೆ ನೆನ್ನೆಯ ನಾಳೆಯ ಬಗ್ಗೆ ಪರಿತಪಿಸಬೇಕಾಗುತ್ತಿರಲಿಲ್ಲವೇನೋ ಹೀಗೆ ನೆನ್ನೆ ನಾಳೆಗಳ ಮಧ್ಯೆ; ಆದರೇನು ಮರೆತಿಹೆವೆಲ್ಲ ನೆನ್ನೆಯ ನಾಳೆಯಲಿ ನಾಳೆಯ ನೆನ್ನೆಯಲಿ ಬದುಕುವುದ ನಾವು! --ಸಂK