ಆ ದಿನಗಳು....
ಸಿಡಿಲೊಡೆದು ಪಳೆಯುಳಿದ
ಇಟ್ಟಿಗೆಗೂಡಲೊಂದು
ಚಾ ದುಖಾನು
ಹೋದ ತಿಂಗಳ
ಪ್ರಜಾಮತದ ಮುಖಪುಟದಿ
ಸುಮಲತಾಳ ಹುಸಿನಗು
ಪಟ್ಟಿಗಾಜಿನ ಲೋಟದ ತಳದಲಿ
ನೀರ್ಕಾಪಿ,
ದವಡೆಯಾಡಿಸಲು ಒಣಕಲು ಬನ್ ಒಂದು
ಮನಸಿನಾಳದ ಕೊರಗು,ಲೋಕಾರೂಢಿ ಚಿಂತೆ
ಎಲ್ಲವೂ ಬ್ರಿಸ್ಟಲ್ ಸಿಗರೇಟಿನ
ಹೊಗೆಯಾಗಿ ಗಾಳಿಯಲಿ ಲೀನ
ಮೂಲೆಮೂಲೆಯ ಜನ್ಮ ಜಾಲಾಡಿ
ಮುದಿರೆಲೆಯ ಗತಿಕಾಣಿಸಿದ
ಉದಯವಾಣಿ ಪತ್ರಿಕೆಯೊಂದು
ಬೆಳಗಿಂದ ಕೂತು ತಲೆಕೆರೆದು ಕುರಮಾಡಿ ಮುಗಿಸಿದ
ಕಾಪಿ-ಬನ್ನು-ಇಡ್ಲಿ-ಮಸಾಲ್ ವಡೆ-ಚಿತ್ರಾನ್ನ-ಸಿಗರೇಟಿನ
ಒಟ್ಟು ಮೊತ್ತ ಇಪ್ಪತ್ತು ರುಪಾಯಿ!!
ಏನಾದರೇನು?
ಗೋರ್ಬಚೇವನಿಗಾಗಲೀ
ಬುಶ್ಶಪ್ಪನಿಗಾಗಲಿ ಮೋಕ್ಷವಿಲ್ಲ,
ಕುಂತಿ ಮಕ್ಕಳಿಗೆ ರಾಜ್ಯವಿಲ್ಲ!
Thursday, August 14, 2008


9 ಅನಿಸಿಕೆಗಳು
ಸುಶೀಲ್ ಕವನಗಳೆಂದರೆ ಹೀಗೆ ಅನ್ನುವಷ್ಟರ ಮಟ್ಟಿಗೆ ನಿನ್ನ ಶೈಲಿಯಲ್ಲಿದೆ.
ಚೆನಾಗಿದೆ ಅಂತ ಮತ್ತೊಮ್ಮೆ ಹೇಳುವ ಅಗತ್ಯವಿಲ್ಲ ಅಂದ್ಕೋತಿನಿ :)
ಮುಂದುವರೆಯಲಿ...
Good one
Jayant (Aug 16)
"Abstract" ಅಂತ ಲೇಬಲ್ ಹಾಕಿ, ಏನಾದರೂ ಪ್ರಶ್ನೆ ಕೇಳೋಕೆ ಅವಕಾಶ ಇಲ್ಲದ ಹಾಗೆ ಮಾಡಿದೀಯ .
ಚೆನ್ನಾಗಿದೆ.
Ranjith (Aug 16)
no doubt....
nice one!
Siri (Aug 16)
tumba chennagi barediddeeri. kavana nammannu a dinagalige kondoyyuvudu adara
gattitanakke sakshi.
ಮನಸಿನಾಳದ ಕೊರಗು,ಲೋಕಾರೂಢಿ ಚಿಂತೆ
ಎಲ್ಲವೂ ಬ್ರಿಸ್ಟಲ್ ಸಿಗರೇಟಿನ
ಹೊಗೆಯಾಗಿ ಗಾಳಿಯಲಿ ಲೀನ...
NICE LINES MAN
nice!
ಮನಸಿನಾಳದ ಕೊರಗು,ಲೋಕಾರೂಢಿ ಚಿಂತೆ
ಎಲ್ಲವೂ ಬ್ರಿಸ್ಟಲ್ ಸಿಗರೇಟಿನ
ಹೊಗೆಯಾಗಿ ಗಾಳಿಯಲಿ ಲೀನ
ಸಿಕ್ಕಾಪಟ್ಟೆ ಚೆನ್ನಗಿವೆ ಈ ಲೈನ್ಸ್...ಮತ್ತೆ ಇಡೀ ಕವನ ಕೂಡಾ ! ಗುಡ್ !
Venu, Sushrutha mattu Lakshmi,
nimma meccugeta nuDigaLige nA RuNi :)
ಚೆನ್ನಾಗಿದೆ...
ಕವಿತೆ ತುಂಬಾ ಇಷ್ಟ ಆಯ್ತು.
ಚೆನ್ನಾಗಿದೆ...
ಕವಿತೆ ತುಂಬಾ ಇಷ್ಟ ಆಯ್ತು.
ಒಂದು ಕಮೆಂಟನ್ನು ಪೋಸ್ಟ್ ಮಾಡಿ
ಒಡನಾಡಿ ಕೊಂಡಿಗಳು
ಲಿಂಕ್ ರಚಿಸಿ