ಭಾನುವಾರ, ಅಕ್ಟೋಬರ್ 12, 2008

ಕಾರಣ

ಇರುಳಿಡೀ ನಿದ್ದೆಯಿಲ್ಲ, ಪರದಾಟ ಮಗ್ಗುಲು ಬದಲಿಸಿದರೂ ಕಣ್ಣು ಕಚ್ಚದೆ-ತಿಣುಕಾಟ ಮುಸುಕೆಳೆದರೆಚಣ, ಕಾಲೆಡೆಗೆ ಒದ್ದುಕೊಂಡೆ ಮರುಕ್ಷಣ ಕುಳಿರ್ಗಾಳಿಯ ಸ್ಪರ್ಶ ಚರಣಕೆ ನಿಲ್ಲದ ಸಂಘರ್ಷ - ಮುಖಬಾಗಕೆ? ಈ ಪರಿಯ ಒದ್ದಾಟ-ಎಳೆದಾಟಕೆ ಕಾರಣ, ಆ ತುಂಡು ಕಂಬಳಿ ಅಂತೆಯೇ, ನಿನ್ನ-ನನ್ನ ಪ್ರೀತಿ ಕೂಡಾ!