ಸಂಜೆ ಆರರ ಸಮಯ
ಹಕ್ಕಿ ಹಿಂಡಿಗೆ ಗೂಡು ಸೇರುವ ತವಕ
ರೆಕ್ಕೆ ಬಲಿತ ಮರಿಹಕ್ಕಿಗೆ
ತನ್ನಮ್ಮನೊಡನೆ ತಾನೂ ಹಾರುವ ಪುಳಕ
ಸಾಕಿಸಲಹಿ ಹಾರಲು ಕಲಿಸಿ,ಕಲಿತ
ಹಕ್ಕಿ ಹಾಗೂ ಮರಿಯ ಜನುಮ ಸಾರ್ಥಕ
ಪಾರ್ಕಿನಲಿ ಕೂತು ಹಾರಿಹೋದ ಮರಿಯನ್ನೇ ದಿಟ್ಟಿಸುತ್ತಿದ್ದ
ಅಜ್ಜ-ಅಜ್ಜಿಯ ಮುಖದಲಿ ಮೂಡಿದ ಭಾವ ಮಾತ್ರ - ಪ್ರಶ್ನಾರ್ಥಕ!
* * * * * * * * * * * * * * * *
Chennaiನಲ್ಲಿ ಭಾರೀ ಮಳೆ
ಬೆಂಗಳೂರೇನೂ ಹೊರತಲ್ಲ
ಈ ಕಾಲದಲಿ ಮಳೆ,ಆಶ್ಚರ್ಯವೆ?
ಸಧ್ಯದ ಆರ್ಥಿಕ ಬಿಕ್ಕಟ್ಟಿನ ಈ ಪರಿಸ್ಥಿತಿಯಲ್ಲಿ
ನಮ್ಮೆಲ್ಲರಂತೆ ಪ್ರಕೃತಿಯೂ
Depressionಗೆ ಒಳಗಾಗಿದ್ದು ಸಹಜವೇ