ನೀವು ನೋಡಬಯಸುವ ಪುಟವು ಈಗ ಇಲ್ಲಿ ಲಭ್ಯವಿದೆ:
ಕಾವ್ಯ-ಕೃಷಿ ಅಡಚಣೆಗಾಗಿ ಕ್ಷಮಿಸಿ.
The content you are looking for is now available on:
ಕಾವ್ಯ-ಕೃಷಿ Sorry for the inconvenience.
ಗುರುವಾರ, ಏಪ್ರಿಲ್ 9, 2009
ಮರೆವು
ಕೆಲವರು ಯಾವಾಗಲೂ ಹೀಗೆ
ಮಾತು ತಮ್ಮ ಆಸ್ತಿ
ಅಂತಲೇ ನಂಬಿದವರು
ಅವಶ್ಯಕತೆ-ಅನವಶ್ಯಕತೆಯೆನ್ನದೆ
ಸದಾ ಮಾತನಾಡುವವರು
ಮೌನ ಮರೆತವರು
ಮತ್ತೆ ಕೆಲವರೂ ಅಷ್ಟೇ
ಯಾವಾಗಲೂ ಹೀಗೇ!
ಮಾತು ಅವರಿಗೂ ಆಸ್ತಿಯೇ
ಕರಗಬಹುದೆಂಬ ಭಯದಲ್ಲಿ
ಬಾಯೇ ಬಿಡದವರು
ಮಾತು ಮರೆತವರು!