ಮೂನ್ನೆಯಿಂದ ಸಹೃದಯರ
ಮಾತಿನಲ್ಲಿ ಒಂದೇ ಎಳೆ
ಬಿದ್ದೆದ್ದು ಸುರಿಯುತಿರುವ ಹುಚ್ಚು-ಮಳೆ
ನನ್ನ ಪೆಚ್ಚುಮನಸ್ಸಿಗೆ ಹೊಳೆದ ಅಂಶವೊಂದೇ 'ಮಳೆಗೂ ಹುಚ್ಚೇ?!'
ಹುಚ್ಚಲ್ಲವದು, ಹೀಗೇ ಸುರೀಬೇಕು ಅನ್ನೋ ಕಟ್ಟಳೆಗಳಿಲ್ಲದ, ಇಷ್ಟೇ ಸುರೀಬೇಕು ಅನ್ನೋ ಆಡಂಬರವಿಲ್ಲದ ಸ್ವೇಚ್ಛೆ
ಬರಗೆಟ್ಟ ಬದುಕಿನ ಹತಾಶಭಾವಕ್ಕೆ ಕೊಡಲಿ- ಪೆಟ್ಟು ಕೊಡಲಿ ಅನ್ನೋ ಪ್ರಕೃತಿಯ ಬಂಡಾಯ