ಇರುಳ ಕತ್ತಲು
ಕೊರೆವ ಛಳಿ
ಘಂಟೆ ಮೂರಾದರೂ
ಬ್ಯಾಗುಗಳೊಡನೆ ಬಡಿದಾಟ
ಬೆಳಕು ಹರಿದು ಮತ್ತೆ,
ಮೂರು ಬಡಿವ ಹೊತ್ತೆ?
ಮನೆಯ ಕಡೆಗೆ ನನ್ನ ದಾರಿ :)
ವಿಚಿತ್ರ! ಈ ದೇಶದಲಿ ಸೂರ್ಯ ನೆತ್ತಿಗೆ ಬಂದದ್ದೇ ಇಲ್ಲ...
ಎಷ್ಟೇ ಕಡಿದರೂ, ಕಿತ್ತಾಡಿದರೂ
ಮೂವತ್ತಕ್ಕಿಂತ ಕಡಿಮೆಯಾಗದ
ಬ್ಯಾಗಿನ ತೂಕ, ನನ್ನ ವಯಸ್ಸಿನಂತೇ!
ಸಾಲದ್ದಕ್ಕೆ ಮರಿಬ್ಯಾಗಿನದೂ ಅದರರ್ಧದಷ್ಟು
ಬಟ್ಟೆ ಬರೆ ಕೋಟು ಬುಕ್ಕುಗಳಂತೆ;
ಕಂದಮ್ಮಗಳಿಗೆಂದೇ ತಂದ ಆನೆ,ಸಿಂಹ,ಕರಡಿಗಳಂತೆ;
ತುಳಿದು ಹೊಸಕಿದರೂ ಸವೆಯದ ಬೂಟುಗಳಂತೆ;
'Allowabel Baggage limit 30KG' ಅಂತೆ!
ಹಾಗೂ ಹೀಗೂ ಪರಿತಪಿಸಿ
ಬೇಕೇಬೇಕೆಂಬುದೆಲ್ಲವ ಗಂಟುಕಟ್ಟಿ
ಮಿಕ್ಕುಳಿದವುಗಳೆಡೆಗೆ ನಿಷ್ಟುರದ ನೋಟಬೀರಿ
ಹುಸಿನಗೆ ನಕ್ಕು ಮುಸುಕೆಳೆದುಕೊಂಡೆ
----*----
ಹನ್ನೆರಡರೊಳಗಲ್ಲಿರಬೇಕಿತ್ತು;
ಹತ್ತೂವರೆಯಾದರೂ ಎಚ್ಚರ ತಪ್ಪಿದ ನಿದ್ದೆ
ತಿಕ್ಕಿ ತೀಡಿ ತೊಳೆಯುವುದ
ನೆಲ
ಮುಗಿಸಿ ಟ್ಯಾಕ್ಸಿ ಕರೆದು ಕೂತಾಗ
ತುರ್ಕಿಸ್ಥಾನದವನೊಡನೆ ಲೋಕಾರೂಢಿ ಮಾತು
ಅಲ್ಲೋ...ಬ್ಯಾಗುಗಳ ಸರತಿ ಸಾಲು
ಎಳೆಯ,ಮಾಸಿದ-ಕಪ್ಪು ಕಂದು ಕೆಂಚು ಕೂದಲುಗಳು
ಅರೆ ಬರೆ ಮುಚ್ಚಿದ ಮುಚ್ಚದ ದೇಹಸಿರಿ
ಹೊಟ್ಟೆ ಚುರುಗುಡುವುದಕೆ ಸುಸಮಯ...
ಬೀರಿಗಿಂತ ಬೆಲೆಹೆಚ್ಚು ಕುಡಿವ ನೀರಿಗೆ
ಊರಿಗೆ ಬಂದ ಮೇಲೆ ನೀರಿಗೆ!?
ತೆರಬೇಕಾದ್ದನ್ನು ತೆತ್ತು ತೀಟೆ ತೀರಿಸಿ
'ತೂಕ'ದವಳೆಡೆಗೆ ಪಾಸ್‍ಪೋರ್ಟಿನ ದಾಪುಗಾಲು
ಎಂದಿನಂತೇ ಸರತಿಸಾಲಿನಲಿ ಒಮ್ಮೆಗೆ ಮುಗಿಯದ
ಮಾತುಕತೆ; ಲೆಕ್ಕಾಚಾರ; ದಂಡ; ಜುಗಾಡು;
ಹೇಗೋ ಮಾಡಿ ಕಡೆಗೆ ಹೊರೆಯನ್ನು ಬೀಳ್ಕೊಟ್ಟು
ಒಣ ನಗೆ ನಕ್ಕು ಸೆಕ್ಯೂರಿಟಿಯೆಡೆಗೆ 'ಪಾದಯಾತ್ರೆ'
ಎಕ್ಸರೇ ಕಣ್ಣಿಗೆ ಬೀಳಲೇಬೇಕು ಎಲ್ಲ ಕಡೆಯಂತೆ
ಬ್ಯಾಗು,ಪರ್ಸು,ಕೋಟು,ಕೊಡೆ,ಬೆಲ್ಟು ಎಲ್ಲವೂ
ಆದರಿಲ್ಲಿ ಪಾದುಕೆಗೂ ಕ್ಷಕಿರಣದ ರಾಜಮರ್ಯಾದೆ
ಎಷ್ಟಾದರೂ ರಾಯಿಂಟಜನ್ನಿನ ನಾಡಲ್ಲವೇ!
ಎಲ್ಲ ಮುಗಿಸಿ ಲೌಂಜಿನಲಿ ತಳವೂರಿ - ಉಸ್ಸಪ್ಪಾ
ಎದುರು ಸೀಟಿನ ಮುದ್ದು ಕಂದಮ್ಮ
-ನ
-ನಗೂ
ದಿವ್ಯೌಷಧ
ಸಕಲ ಸುಸ್ತೂ ಮರೆತ ಹಾಗೆ..ಅಬ್ಬಾ ಸಧ್ಯ
ತೂಕ ಮಾಡಿದ್ದು ಬ್ಯಾಗುಗಳನ್ನಷ್ಟೇ, ನನ್ನಲ್ಲಲ್ಲವಲ್ಲ!!!
ನೀವು ನೋಡಬಯಸುವ ಪುಟವು ಈಗ ಇಲ್ಲಿ ಲಭ್ಯವಿದೆ:
ಕಾವ್ಯ-ಕೃಷಿ
ಅಡಚಣೆಗಾಗಿ ಕ್ಷಮಿಸಿ.
The content you are looking for is now available on:
ಕಾವ್ಯ-ಕೃಷಿ
Sorry for the inconvenience.
ಸೋಮವಾರ, ನವೆಂಬರ್ 9, 2009
ಯಾತ್ರೆ
ಇರುಳ ಕತ್ತಲು
ಕೊರೆವ ಛಳಿ
ಘಂಟೆ ಮೂರಾದರೂ
ಬ್ಯಾಗುಗಳೊಡನೆ ಬಡಿದಾಟ
ಬೆಳಕು ಹರಿದು ಮತ್ತೆ,
ಮೂರು ಬಡಿವ ಹೊತ್ತೆ?
ಮನೆಯ ಕಡೆಗೆ ನನ್ನ ದಾರಿ :)
ವಿಚಿತ್ರ! ಈ ದೇಶದಲಿ ಸೂರ್ಯ ನೆತ್ತಿಗೆ ಬಂದದ್ದೇ ಇಲ್ಲ...
ಎಷ್ಟೇ ಕಡಿದರೂ, ಕಿತ್ತಾಡಿದರೂ
ಮೂವತ್ತಕ್ಕಿಂತ ಕಡಿಮೆಯಾಗದ
ಬ್ಯಾಗಿನ ತೂಕ, ನನ್ನ ವಯಸ್ಸಿನಂತೇ!
ಸಾಲದ್ದಕ್ಕೆ ಮರಿಬ್ಯಾಗಿನದೂ ಅದರರ್ಧದಷ್ಟು
ಬಟ್ಟೆ ಬರೆ ಕೋಟು ಬುಕ್ಕುಗಳಂತೆ;
ಕಂದಮ್ಮಗಳಿಗೆಂದೇ ತಂದ ಆನೆ,ಸಿಂಹ,ಕರಡಿಗಳಂತೆ;
ತುಳಿದು ಹೊಸಕಿದರೂ ಸವೆಯದ ಬೂಟುಗಳಂತೆ;
'Allowabel Baggage limit 30KG' ಅಂತೆ!
ಹಾಗೂ ಹೀಗೂ ಪರಿತಪಿಸಿ
ಬೇಕೇಬೇಕೆಂಬುದೆಲ್ಲವ ಗಂಟುಕಟ್ಟಿ
ಮಿಕ್ಕುಳಿದವುಗಳೆಡೆಗೆ ನಿಷ್ಟುರದ ನೋಟಬೀರಿ
ಹುಸಿನಗೆ ನಕ್ಕು ಮುಸುಕೆಳೆದುಕೊಂಡೆ
----*----
ಹನ್ನೆರಡರೊಳಗಲ್ಲಿರಬೇಕಿತ್ತು;
ಹತ್ತೂವರೆಯಾದರೂ ಎಚ್ಚರ ತಪ್ಪಿದ ನಿದ್ದೆ
ತಿಕ್ಕಿ ತೀಡಿ ತೊಳೆಯುವುದ
ನೆಲ
ಮುಗಿಸಿ ಟ್ಯಾಕ್ಸಿ ಕರೆದು ಕೂತಾಗ
ತುರ್ಕಿಸ್ಥಾನದವನೊಡನೆ ಲೋಕಾರೂಢಿ ಮಾತು
ಅಲ್ಲೋ...ಬ್ಯಾಗುಗಳ ಸರತಿ ಸಾಲು
ಎಳೆಯ,ಮಾಸಿದ-ಕಪ್ಪು ಕಂದು ಕೆಂಚು ಕೂದಲುಗಳು
ಅರೆ ಬರೆ ಮುಚ್ಚಿದ ಮುಚ್ಚದ ದೇಹಸಿರಿ
ಹೊಟ್ಟೆ ಚುರುಗುಡುವುದಕೆ ಸುಸಮಯ...
ಬೀರಿಗಿಂತ ಬೆಲೆಹೆಚ್ಚು ಕುಡಿವ ನೀರಿಗೆ
ಊರಿಗೆ ಬಂದ ಮೇಲೆ ನೀರಿಗೆ!?
ತೆರಬೇಕಾದ್ದನ್ನು ತೆತ್ತು ತೀಟೆ ತೀರಿಸಿ
'ತೂಕ'ದವಳೆಡೆಗೆ ಪಾಸ್‍ಪೋರ್ಟಿನ ದಾಪುಗಾಲು
ಎಂದಿನಂತೇ ಸರತಿಸಾಲಿನಲಿ ಒಮ್ಮೆಗೆ ಮುಗಿಯದ
ಮಾತುಕತೆ; ಲೆಕ್ಕಾಚಾರ; ದಂಡ; ಜುಗಾಡು;
ಹೇಗೋ ಮಾಡಿ ಕಡೆಗೆ ಹೊರೆಯನ್ನು ಬೀಳ್ಕೊಟ್ಟು
ಒಣ ನಗೆ ನಕ್ಕು ಸೆಕ್ಯೂರಿಟಿಯೆಡೆಗೆ 'ಪಾದಯಾತ್ರೆ'
ಎಕ್ಸರೇ ಕಣ್ಣಿಗೆ ಬೀಳಲೇಬೇಕು ಎಲ್ಲ ಕಡೆಯಂತೆ
ಬ್ಯಾಗು,ಪರ್ಸು,ಕೋಟು,ಕೊಡೆ,ಬೆಲ್ಟು ಎಲ್ಲವೂ
ಆದರಿಲ್ಲಿ ಪಾದುಕೆಗೂ ಕ್ಷಕಿರಣದ ರಾಜಮರ್ಯಾದೆ
ಎಷ್ಟಾದರೂ ರಾಯಿಂಟಜನ್ನಿನ ನಾಡಲ್ಲವೇ!
ಎಲ್ಲ ಮುಗಿಸಿ ಲೌಂಜಿನಲಿ ತಳವೂರಿ - ಉಸ್ಸಪ್ಪಾ
ಎದುರು ಸೀಟಿನ ಮುದ್ದು ಕಂದಮ್ಮ
-ನ
-ನಗೂ
ದಿವ್ಯೌಷಧ
ಸಕಲ ಸುಸ್ತೂ ಮರೆತ ಹಾಗೆ..ಅಬ್ಬಾ ಸಧ್ಯ
ತೂಕ ಮಾಡಿದ್ದು ಬ್ಯಾಗುಗಳನ್ನಷ್ಟೇ, ನನ್ನಲ್ಲಲ್ಲವಲ್ಲ!!!