ಸಂಜೆ ಆರರ ಸಮಯ
ಹಕ್ಕಿ ಹಿಂಡಿಗೆ ಗೂಡು ಸೇರುವ ತವಕ
ರೆಕ್ಕೆ ಬಲಿತ ಮರಿಹಕ್ಕಿಗೆ
ತನ್ನಮ್ಮನೊಡನೆ ತಾನೂ ಹಾರುವ ಪುಳಕ
ಸಾಕಿಸಲಹಿ ಹಾರಲು ಕಲಿಸಿ,ಕಲಿತ
ಹಕ್ಕಿ ಹಾಗೂ ಮರಿಯ ಜನುಮ ಸಾರ್ಥಕ
ಪಾರ್ಕಿನಲಿ ಕೂತು ಹಾರಿಹೋದ ಮರಿಯನ್ನೇ ದಿಟ್ಟಿಸುತ್ತಿದ್ದ
ಅಜ್ಜ-ಅಜ್ಜಿಯ ಮುಖದಲಿ ಮೂಡಿದ ಭಾವ ಮಾತ್ರ - ಪ್ರಶ್ನಾರ್ಥಕ!
* * * * * * * * * * * * * * * *
Chennaiನಲ್ಲಿ ಭಾರೀ ಮಳೆ
ಬೆಂಗಳೂರೇನೂ ಹೊರತಲ್ಲ
ಈ ಕಾಲದಲಿ ಮಳೆ,ಆಶ್ಚರ್ಯವೆ?
ಸಧ್ಯದ ಆರ್ಥಿಕ ಬಿಕ್ಕಟ್ಟಿನ ಈ ಪರಿಸ್ಥಿತಿಯಲ್ಲಿ
ನಮ್ಮೆಲ್ಲರಂತೆ ಪ್ರಕೃತಿಯೂ
Depressionಗೆ ಒಳಗಾಗಿದ್ದು ಸಹಜವೇ
ನೀವು ನೋಡಬಯಸುವ ಪುಟವು ಈಗ ಇಲ್ಲಿ ಲಭ್ಯವಿದೆ:
ಕಾವ್ಯ-ಕೃಷಿ
ಅಡಚಣೆಗಾಗಿ ಕ್ಷಮಿಸಿ.
The content you are looking for is now available on:
ಕಾವ್ಯ-ಕೃಷಿ
Sorry for the inconvenience.
ಕಿರುಗವಿತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕಿರುಗವಿತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಭಾನುವಾರ, ಅಕ್ಟೋಬರ್ 26, 2008
ಹೀಗೆರಡು ಕಿರುಗವಿತೆಗಳು...
ಸಂಜೆ ಆರರ ಸಮಯ
ಹಕ್ಕಿ ಹಿಂಡಿಗೆ ಗೂಡು ಸೇರುವ ತವಕ
ರೆಕ್ಕೆ ಬಲಿತ ಮರಿಹಕ್ಕಿಗೆ
ತನ್ನಮ್ಮನೊಡನೆ ತಾನೂ ಹಾರುವ ಪುಳಕ
ಸಾಕಿಸಲಹಿ ಹಾರಲು ಕಲಿಸಿ,ಕಲಿತ
ಹಕ್ಕಿ ಹಾಗೂ ಮರಿಯ ಜನುಮ ಸಾರ್ಥಕ
ಪಾರ್ಕಿನಲಿ ಕೂತು ಹಾರಿಹೋದ ಮರಿಯನ್ನೇ ದಿಟ್ಟಿಸುತ್ತಿದ್ದ
ಅಜ್ಜ-ಅಜ್ಜಿಯ ಮುಖದಲಿ ಮೂಡಿದ ಭಾವ ಮಾತ್ರ - ಪ್ರಶ್ನಾರ್ಥಕ!
* * * * * * * * * * * * * * * *
Chennaiನಲ್ಲಿ ಭಾರೀ ಮಳೆ
ಬೆಂಗಳೂರೇನೂ ಹೊರತಲ್ಲ
ಈ ಕಾಲದಲಿ ಮಳೆ,ಆಶ್ಚರ್ಯವೆ?
ಸಧ್ಯದ ಆರ್ಥಿಕ ಬಿಕ್ಕಟ್ಟಿನ ಈ ಪರಿಸ್ಥಿತಿಯಲ್ಲಿ
ನಮ್ಮೆಲ್ಲರಂತೆ ಪ್ರಕೃತಿಯೂ
Depressionಗೆ ಒಳಗಾಗಿದ್ದು ಸಹಜವೇ
ಗುರುವಾರ, ಮೇ 1, 2008
ಸಿಹಿ-ಕಹಿ
ಕನ್ನಡದ ಕ್ಲಾಸಿನಲ್ಲಿ ಕದ್ದು-ಮುಚ್ಚಿ
ಬೆಲ್ಲದ ಸವಿ ಸವಿಯುವಾಗ ಸಿಕ್ಕಿಬಿದ್ದು
ಬೆಲ್ಲಾದ ನಂತರವೂ
ಬೆತ್ತಗಳ ಕೆಳಗೆ ಬೆತ್ತಲಾಗುವ ಪುಟ್ಟ ಮನಸು
ಮುಲುಗುಡುವ ಮುಂಗೈ-ಬೆರಳು
ಅದುಮಿಟ್ಟ ಕಣ್ಣ ಕೋಡಿ
ಒತ್ತಿ ಹಿಡಿದ ಯಾತನೆಯ ಕೂಗು
ಬೆಲ್ಲದ ಸಿಹಿಯನ್ನೂ ಮರೆಸುವಂತಹ
ಕಹಿ ನೆನಪುಗಳು!
ಬುಧವಾರ, ಏಪ್ರಿಲ್ 30, 2008
ನಾಳೆ
ನೆನ್ನೆಯ ನಾಳೆಯೊಂದು ಯೋಚಿಸಿತು
ಮೊನ್ನಿನ ನಾಳೆ ಹೀಗೆ ಮಾಡಿದ್ದರೆ
ನಾಳೆಗಳ ನೆನ್ನೆಗೆ ಈ ಗತಿ ಬರುತ್ತಿರಲಿಲ್ಲವೇನೋ!?
ಆದರೆ,
ನೆನ್ನೆಗೂ ನೆನ್ನೆಗಳಿದ್ದುದ
ಏಕೆ ಮರೆತುಹೋಯಿತೋ!?
ಇದಕ್ಕುತ್ತರವಾಗಿ ಎಸ್ಸೆಮ್ಮೆಸ್ ಮೂಲಕ ಗೆಳೆಯ ಸಂತೋಷ ಕಳಿಸಿದ ನಾಕು ಸಾಲುಗಳು ಹೀಗಿವೆ:
ಇಂದು
ನಾಳೆಯ ನೆನ್ನೆಯೊಂದು
ಯೋಚಿಸಿದ್ದರೆ ನೆನ್ನೆಯ ನಾಳೆಯ ಬಗ್ಗೆ
ಪರಿತಪಿಸಬೇಕಾಗುತ್ತಿರಲಿಲ್ಲವೇನೋ ಹೀಗೆ
ನೆನ್ನೆ ನಾಳೆಗಳ ಮಧ್ಯೆ;
ಆದರೇನು ಮರೆತಿಹೆವೆಲ್ಲ
ನೆನ್ನೆಯ ನಾಳೆಯಲಿ
ನಾಳೆಯ ನೆನ್ನೆಯಲಿ
ಬದುಕುವುದ ನಾವು!
--ಸಂK